ಸಿದ್ದಾಪುರ, ಏ. 8: ಕರ್ತವ್ಯದಲ್ಲಿದ್ದ ಪೆÇಲೀಸ್ ಮುಖ್ಯಪೇದೆಯ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲೆ ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಿಬೆಟ್ಟದ ಜುಮಾ ಮಸೀದಿಯ ಬಳಿ ತಾ. 7 ರಂದು ರಾತ್ರಿ 10.30ರ ಸಮಯಕ್ಕೆ ಪಾಲಿಬೆಟ್ಟದ ಊರುಗುಪ್ಪೆ ನಿವಾಸಿ ಯಾಗಿರುವ ಸೈಯದ್ ಅಲವಿ (37) ಎಂಬಾತ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತ ಕಿರುಚಾಡುತ್ತಿದ್ದನು ಎನ್ನಲಾಗಿದೆ. ಈ ವಿಚಾರ ತಿಳಿದು ಪಾಲಿಬೆಟ್ಟ ಉಪಠಾಣೆಯ ಮುಖ್ಯಪೇದೆ ಎಂ.ಎಂ. ಆಲಿಬಾ ಸ್ಥಳಕ್ಕೆ ತೆರಳಿ ಸೈಯದ್ ಅಲವಿ ಬಳಿ ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ಆರೋಪಿ ಸೈಯದ್ ಅಲವಿ ಮುಖ್ಯಪೇದೆಯ ಸಮವಸ್ತ್ರ ಹಿಡಿದು ಎಳೆದಾಡಿ ಸಮವಸ್ತ್ರದ ಅಂಗಿಯನ್ನು ಹರಿದು ಎಡಗಣ್ಣಿಗೆ ಗುದ್ದಿ ಗಾಯಗೊಳಿಸಿ ತಳ್ಳಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಗಾಯಗೊಂಡ ಮುಖ್ಯಪೇದೆ ಪಾಲಿಬೆಟ್ಟ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಆಲಿಬಾ ಸಿದ್ದಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.