ಮಡಿಕೇರಿ ಏ.8 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಮೈದಾನ 1ರಲ್ಲಿ ಕುಂಞÂರ ಮತ್ತು ಅಪ್ಪಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಂಞÂರ 9 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಪಾರಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕುಂಞÂರ ತಂಡ 3.4 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 66 ರನ್ ಸೇರಿಸಿ ಗೆಲುವಿನ ನಗು ಬೀರಿತು.
ಕುಟ್ಟಂಡ (ಕಾರ್ಮಾಡು) ಮತ್ತು ಬಾಚಿನಾಡಂಡ ನಡುವಿನ ಪಂದ್ಯದಲ್ಲಿ ಬಾಚಿನಾಡಂಡ 9 ವಿಕೆಟ್ ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕುಟ್ಟಂಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 99 ರನ್ ಗಳನ್ನು ಗಳಿಸಿತು. ಬಾಚಿನಾಡಂಡ ತಂಡ 5.4 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 103 ರನ್ ಗಳನ್ನು ಗಳಿಸಿ ಜಯ ಸಾಧಿಸಿತು.
ಬೈರೇಟಿರ (ಕಾಟಕೇರಿ) ಮತ್ತು ಅಪ್ಪುಮಣಿಯಂಡ ನಡುವಿನ ಹಣಾಹಣಿಯಲ್ಲಿ ಅಪ್ಪುಮಣಿಯಂಡ ತಂಡ 8 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೈರೇಟಿರ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಸೇರಿಸಿತು. ಅಪ್ಪುಮಣಿಯಂಡ ತಂಡ 5.2 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿ ಜಯ ಸಾಧಿಸಿತು.
ಚೆಕ್ಕೇರ ಮತ್ತು ಬಲ್ಲಡಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೇರ 8 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಲ್ಲಡಿಚಂಡ 6 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 34 ರನ್ ಸೇರಿಸಿತು. ಚೆಕ್ಕೇರ 3 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಚೇನಂಡ ಮತ್ತು ಸರ್ಕಂಡ ನಡುವಿನ ಪಂದ್ಯದಲ್ಲಿ ಸರ್ಕಂಡ 9 ರನ್ ಗಳಿಂದ ವಿಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೇನಂಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತು. ಸರ್ಕಂಡ 4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 91 ರನ್ ಸೇರಿಸಿ ಗೆಲುವು ಕಂಡಿತು.
ಪಾಂಡಂಡ ಮತ್ತು ಕುಂದೀರ ತಂಡಗಳ ನಡುವಿನ ಪಂದ್ಯದಲ್ಲಿ ಪಾಂಡಂಡ 8 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕುಂದೀರ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 34 ರನ್ ಗಳನ್ನು ಗಳಿಸಿತು. ಪಾಂಡಂಡ 3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 36 ರನ್ ಸೇರಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಬಾಚೆಟ್ಟಿರ ಮತ್ತು ಪೆÇನ್ನಚಂಡ ನಡುವಿನ ಪಂದ್ಯದಲ್ಲಿ ಪೆÇನ್ನಚಂಡ 108 ರನ್ ಗಳÀ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪೆÇನ್ನಚಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಬಾಚೆಟ್ಟಿರ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 33 ರನ್‍ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ಮೈದಾನ 2ರಲ್ಲಿ ಬೊಳಕಾರಂಡ (ಕೊಣಂಜಗೇರಿ) ಮತ್ತು ಬಾಳೆಕುಟ್ಟೀರ ನಡುವಿನ ಪಂದ್ಯದಲ್ಲಿ ಬೊಳಕಾರಂಡ 39 ರನ್‍ಗಳ ಜಯ ಸಾಧಿಸಿತು. ಬೊಳಕಾರಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಮತ್ತು ಬಾಳೆಕುಟ್ಟೀರ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿತು
ಚೀಯಂಡಿರ ಮತ್ತು ಅಳಮೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಅಳಮೇಂಗಡ 50 ರನ್ ಗಳಿಂದ ಗೆಲುವು ಸಾಧಿಸಿತು. ಅಳಮೇಂಗಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 81 ರನ್ ಮತ್ತು ಚೀಯಂಡಿರ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 30 ರನ್ ಸೇರಿಸಿತು.
ಆದೇಂಗಡ ಮತ್ತು ಬಲ್ಲಣಮಾಡ ನಡುವಿನ ಹಣಾಹಣಿಯಲ್ಲಿ ಆದೇಂಗಡ 7 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಬಲ್ಲಣಮಾಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 49 ರನ್ ಮತ್ತು ಅದೇಂಗಡ 3 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿ ಗೆಲುವು ಸಾಧಿಸಿತು.
ಮಾಣೀರ (ವೆಸ್ಟ್ ನೆಮ್ಮಲೆ) ಮತ್ತು ಅಯ್ಯಕುಟ್ಟಿರ ನಡುವಿನ ಪಂದ್ಯದಲ್ಲಿ 9 ವಿಕೆಟ್‍ಗಳಿಂದ ಅಯ್ಯಕುಟ್ಟಿರ ಜಯ ಸಾಧಿಸಿತು. ಮಾಣೀರ 6 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 32 ರನ್ ಮತ್ತು ಅಯ್ಯಕುಟ್ಟೀರ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.
ಮುಂಡ್ಯೋಳಂಡ ಮತ್ತು ಮಲ್ಲಮಾಡ ನಡುವಿನ ಪಂದ್ಯದಲ್ಲಿ 16 ರನ್ ಗಳಿಂದ ಮುಂಡ್ಯೋಳಂಡ ಗೆಲುವು ದಾಖಲಿಸಿತು. ಮುಂಡ್ಯೋಳಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದರೆ ಮಲ್ಲಮಾಡ 5 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿ ಸೋಲನುಭವಿಸಿತು.
ಪಟ್ರಪಂಡ ಮತ್ತು ಬೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ 61 ರನ್ ಗಳಿಂದ ಬೊಟ್ಟಂಗಡ ಗೆಲುವು ಸಾಧಿಸಿತು. ಬೊಟ್ಟಂಗಡ 6 ಓವರ್‍ಗಳಲ್ಲಿ 109 ರನ್ ಕಲೆ ಹಾಕಿದರೆ, ಪಟ್ರಪಂಡ 4 ವಿಕೆಟ್ ನಷ್ಟಕ್ಕೆ 48 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಪಾಲಚಂಡ ಮತ್ತು ನೆಲ್ಲಿರ ನಡುವಿನ ಪಂದ್ಯದಲ್ಲಿ ಪಾಲಚಂಡ ತಂಡಕ್ಕೆ 9 ವಿಕೆಟ್‍ಗಳ ಜಯ ಲಭಿಸಿತು. ನೆಲ್ಲಿರ 6 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದರೆ ಪಾಲಚಂಡ 1 ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು.