ಪೆÇನ್ನಂಪೇಟೆ, ಏ. 8: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೂರನೇ ವರ್ಷದ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ತಾ. 10 ರಿಂದ ನಡೆಯಲಿದ್ದು, ಮೈದಾನವನ್ನು ಪಂದ್ಯಾವಳಿಗೆ ಸಜ್ಜುಗೊಳಿಸಲಾಗುತ್ತಿದೆ.

ಟಿ-20 ಮಾದರಿಯ ಈ ಪಂದ್ಯಾವಳಿಯಲ್ಲಿ 10 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೆÇೀಟಿ ನಡೆಸಲಿದ್ದು, ಸುಮಾರು 160 ಆಟಗಾರರು ಭಾಗವಹಿಸಲಿದ್ದಾರೆ. ಕೊಡವ ಜನಾಂಗದ ಯುವ ಸಮೂಹದ ಲೆದರ್ ಬಾಲ್ ಆಟಗಾರರು, ದೇಶಿಯ ತಂಡ ಪ್ರತಿನಿಧಿಸುವಂತಾಗಬೇಕು ಎಂಬ ಕನಸಿನೊಂದಿಗೆ ಟೂರ್ನಿ ಆಯೋಜಿಸಲಾಗಿದೆ.

ಕೂರ್ಗ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥರಾಗಿ ಚೇರಂಡ ಕಿಶನ್ ಮಾದಪ್ಪ, ಅಧ್ಯಕ್ಷರಾಗಿ ಪೆÇರುಕೊಂಡ ಸುನಿಲ್, ಉಪಾಧ್ಯಕ್ಷರಾಗಿ ಪಾಲಚಂಡ ಜಗನ್ ಉತ್ತಪ್ಪ, ಕಾರ್ಯದರ್ಶಿಯಾಗಿ ಕೀತಿಯಂಡ ಗಣಪತಿ, ನಿರ್ದೇಶಕರಾಗಿ ಕುಲ್ಲೇಟಿರ ಶಾಂತ ಕಾಳಪ್ಪ, ಟೂರ್ನಿ ನಿರ್ದೇಶಕರಾಗಿ ಮಡ್ಲಂಡ ದರ್ಶನ್ ಪೆಮ್ಮಯ್ಯ, ನಿರ್ದೇಶಕರಾಗಿ ಅಣ್ಣಳಮಾಡ ರಾಯ್ ಚಿಣ್ಣಪ್ಪ, ಚೇಂದೀರ ರಚನ್ ಚಿಣ್ಣಪ್ಪ, ಬಲ್ಲಂಡ ರೇಣಾ ದೇವಯ್ಯ, ಚೆರುಮಂದಂಡ ಸೋಮಣ್ಣ ಕಾರ್ಯನಿರ್ವಹಿಸುತ್ತಿದ್ದಾರೆ ಗೌರವಾನ್ವಿತ ನಿರ್ದೇಶಕರಾಗಿ ಮಂಡೇಪಂಡ ರತನ್ ಕುಟ್ಟಯ್ಯ, ಕೊಂಗಂಡ ದಿಲೀಪ್, ಬಾಳೆಯಡ ಕರುಣ್ ಕಾಳಪ್ಪ, ಪಾಲಚಂಡ ಪೂಜಿತ ಉತ್ತಪ್ಪ, ಪೆÇರುಕೊಂಡ ಬೋಪಣ್ಣ, ಚೇಂದಂಡ ನವೀನ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ವಿಜೇತ ತಂಡಕ್ಕೆ 2 ಲಕ್ಷ ನಗದು, ರನ್ನರ್ ಅಪ್ ತಂಡಕ್ಕೆ 1 ಲಕ್ಷ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು

ಅವರೆಮಾದಂಡ ಶರಣ್ ಪೂಣಚ್ಚ, ಪಾಡೆಯಂಡ ದೀಪಕ್ ದೇವಯ್ಯ, ಮುಕ್ಕಾಟಿರ ಮ್ಯಾಕ್ ತಿಮ್ಮಯ್ಯ, ಕರ್ನಂಡ ರಾಹುಲ್ ಕಾರ್ಯಪ್ಪ, ಕೋಳೆರ ಕೀರ್ತನ್ ಅಯ್ಯಮ್ಮ ಮಾಲಿಕತ್ವದ ಕೊಡವ ಟ್ರೈಬ್ ತಂಡ, ಬೇರೆರ ಪ್ರಣಯ್, ಕಾಡ್ಯಮಾಡ ಅಭಿμÉೀಕ್ ಮುದ್ದಯ್ಯ ಮಾಲೀಕತ್ವದ ಕೂರ್ಗ್ ಬ್ಲಾಸ್ಟರ್ಸ್, ಬೊಪ್ಪಂಡ ಸೂರಜ್ ಗಣಪತಿ ಮಾಲಿಕತ್ವದ ಟೀಂ ಲೆವರೇಜ್, ಕೋಟೆರ ಸುನಿಲ್ ಸೋಮಣ್ಣ, 4ಆರನೇ ಪುಟಕ್ಕೆ

(ಮೊದಲ ಪುಟದಿಂದ) ಉದಿಯಂಡ ನೀರಜ್ ಬೋಪಣ್ಣ, ಐಚೋಡಿಯಂಡ ನವನೀತ್ ಜೋಯಪ್ಪ ಮಾಲೀಕತ್ವದ ಟೀಂ ಕೂರ್ಗ್ ಯುನೈಟೆಡ್, ಮಾದಂಡ ತಿಮ್ಮಯ್ಯ, ಮಾಳೇಟಿರ ಕಾಳಪ್ಪ ಮಾಲೀಕತ್ವದ ಪ್ರಗತಿ ಕ್ರಿಕೆಟ್ ಅಕಾಡೆಮಿ, ತ್ಯಾಗಿ, ಹಂಚೆಟ್ಟಿರ ಶಿಪ್ರಜ್ ಸೋಮಣ್ಣ ಮಾಲೀಕತ್ವದ ಎಂಟಿಬಿ ರಾಯಲ್ಸ್, ಗುಡ್ಡಮಾಡ ಅಪ್ಪಿ ಸುಬ್ರಮಣಿ ಮಾಲಿಕತ್ವದ ಕೊಡವ ರೈಸಿಂಗ್ ಸ್ಟಾರ್, ತೀತಿರ ರೋಶನ್ ಅಪ್ಪಚ್ಚು, ಚೆಕ್ಕೇರ ಆದರ್ಶ್, ಬಯವಂಡ ಪ್ರತು ಪೂವಣ್ಣ, ಚೆಕ್ಕೇರ ಚಂದ್ರ ಪ್ರಕಾಶ್ ಮಾಲೀಕತ್ವದ ಟೀಮ್ ಅಂಜಿಗೇರಿ ನಾಡ್, ಅಕ್ಕಪಂಡ ಸುಭಾμï, ಕೋಟ್ರಮಾಡ ಹರೀಶ್ ಅಚ್ಚಪ್ಪ, ಕಂಬೇಯಂಡ ಮೋಹನ್ ನಾಣಯ್ಯ ಮಾಲೀಕತ್ವದ ಕೂರ್ಗ್ ಟೈಟಾನ್ಸ್, ಅಣ್ಣಳಮಾಡ ಬೆನೇಟ್ ಅಚ್ಚಯ್ಯ, ಅಣ್ಣಳಮಾಡ ಚೋಟು ಚಿಟ್ಟಿಯಪ್ಪ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಅಣ್ಣಳಮಾಡ ತರು ತಂಗಮ್ಮ, ಅಣ್ಣಳಮಾಡ ಶಿಲ್ಪ ಬೆನೆಟ್ ಮಾಲೀಕತ್ವದ ಬ್ಲೇಜ್ ಬ್ರಿಗೇಡ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಪಿಚ್ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಪಿಚ್ ಕ್ಯೂರೇಟರ್ ಅಣ್ಣಳಮಾಡ ರಾಯ್ ಚಿಣ್ಣಪ್ಪ, ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಕ್ಕೂ ಅನುಕೂಲವಾಗುವ ರೀತಿಯಲ್ಲಿ ಪಿಚ್ ಸಿದ್ದಪಡಿಸಲಾಗಿದ್ದು, ಕ್ರೀಡಾಪ್ರೇಮಿಗಳು ಉತ್ತಮ ಕ್ರಿಕೆಟ್ ರಾಸದೌತಣವನ್ನು ಸವಿಯಬಹುದು ಎಂದರು.

ತಾ. 10 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೆÇನ್ನಣ್ಣ, ಕೂರ್ಗ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಚೇರಂಡ ಕಿಶನ್ ಮಾದಪ್ಪ, ಇನ್ಫೋಸಿಸ್‍ನ ನಿವೃತ್ತ ಉದ್ಯೋಗಿ ಮಾಚಿಮಂಡ ಮೋಹನ್ ಮಾದಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುμÁ್ಠನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕಾವೇರಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಮಾಳೇಟಿರ ಕಾವೇರಿಯಪ್ಪ, ಫ್ರಾನ್ಸ್ ಬಯೋಗ್ರೂಪ್ಸ್ ಡೇಟಾ ಕ್ವಾಲಿಟಿ ಗವರ್ನರ್ ಪಾಲಚಂಡ ಪೂಜಿತ ಉತ್ತಪ್ಪ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್, ಉದ್ಯಮಿ ಗುಮ್ಮಟಿರ ಕಿಲನ್ ಗಣಪತಿ, ವೀರಾಜಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಭಾಗವಹಿಸಲಿದ್ದಾರೆ. -ಚನ್ನನಾಯಕ