ಹೆಚ್.ಕೆ.ಜಗದೀಶ್
ಗೋಣಿಕೊಪ್ಪಲು, ಏ. 6: ಇಂದಿನಿಂದ 6 ದಿನಗಳ ಹೊನಲು ಬೆಳಕಿನ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯು ಗೋಣಿಕೊಪ್ಪ ಸಮೀಪದ ಅರುವತ್ತೋಕು ಬಳಿಯ ಅಥ್ಲಾನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದು 5ನೇ ವರ್ಷದ ಆತಿಥ್ಯವನ್ನು ದೇವಣಗೇರಿ ಮುಕ್ಕಾಟಿರ ಕುಟುಂಬವು ವಹಿಸಿದೆ. ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿ ನಡೆಸಲು ಅಂತಿಮ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿವೆ.
ತಾ. 7 ರಂದು (ಇಂದು) ಸಂಜೆ 5 ಗಂಟೆಗೆ ವಿಧಾನ ಪರಿಷತ್‍ನ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಕಳೆದ 5 ವರ್ಷಗಳಿಂದ ಕೊಡವ ಕುಟುಂಬಗಳ ನಡುವೆ ಫುಟ್ಬಾಲ್ ಪಂದ್ಯಾಟ ಆಯೋಜನೆಗೊಳ್ಳುತ್ತಿದ್ದು ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ದೇವಣಗೇರಿಯ ಮುಕ್ಕಾಟಿರ ಕುಟುಂಬವು ಫುಟ್ಬಾಲ್ ಪಂದ್ಯಾಟದ ಆತಿಥ್ಯ ವಹಿಸಲಿದ್ದು, 6 ದಿನಗಳ ಕಾಲ ನಡೆಯುವ ಪಂದ್ಯಾವಳಿಯು ಹೊನಲು ಬೆಳಕಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.
ಗೋಣಿಕೊಪ್ಪದ ಅಥ್ಲಾನ್ ಟರ್ಫ್ ಮೈದಾನದಲ್ಲಿ ಪಂದ್ಯಾವಳಿಯು ಆಯೋಜನೆಗೊಂಡಿದ್ದು ಸಂಜೆಯ ವೇಳೆ ಹೊನಲು ಬೆಳಕಿನಲ್ಲಿ ಪಂದ್ಯಾವಳಿಯು ಆಯೋಜನೆÀಗೊಂಡಿರುವುದರಿಂದ ಸಹಜವಾಗಿಯೇ ಫುಟ್ಬಾಲ್ ಪ್ರಿಯರು ಸಾವಿರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಮೈದಾನಕ್ಕೆ ಆಗಮಿಸುವ ಫುಟ್ಬಾಲ್ ಪ್ರಿಯರಿಗೆ ತಮ್ಮ ವಾಹನವನ್ನು ನಿಲುಗಡೆ ಮಾಡಲು 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆಯೋಜಕರು ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೆ ಮೈದಾನದ ಸುತ್ತಲೂ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದ್ದು ಪಂದ್ಯಾವಳಿ ವೀಕ್ಷಣೆ ಮಾಡಲು ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಬಾರಿ 5ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಕಾಲ್ಚೆಂಡು ಪಂದ್ಯಾವಳಿ ನಡೆಯುತ್ತಿದೆ. ದೇವಣಗೇರಿ ಮುಕ್ಕಾಟಿರ ಕುಟುಂಬದವರು ಪಂದ್ಯಾಟದ ಯಶಸ್ವಿಗೆ ಸಕಲ ಸಿದ್ದತೆಗಳನ್ನು ಕೈಗೊಂಡಿದ್ದಾರೆ. 5-2 ಮಾದರಿಯಲ್ಲಿ ಕೊಡವ ಪುಟ್ಬಾಲ್ ಉತ್ಸವ ನಡೆಯುತ್ತಿದೆ. ದೀರ್ಘಕಾಲದ ಕೊಡÀವ ಹಾಕಿ ಉತ್ಸವದ ಯಶಸ್ಸು ಮತ್ತು ಚೈತನ್ಯದಿಂದ ಸ್ಪೂರ್ತಿ ಪಡೆದು ಕೊಡವ ಫುಟ್ಬಾಲ್ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ಕೊಡವ ಕುಟುಂಬಗಳನ್ನು ಒಗ್ಗೂಡಿಸಲು ಕ್ರೀಡಾ ಕ್ಷೇತ್ರದಲ್ಲಿ ಯುವ ಸಮೂಹವನ್ನು ಉತ್ತೇಜಿಸಲು ಮತ್ತು ಕೊಡಗಿನ ಖ್ಯಾತ ಕ್ರೀಡಾ ಪರಂಪರೆಯನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡಾಕೂಟಗಳಿಂದ ಸಾಧ್ಯವಾಗುತ್ತಿದೆ. ಫುಟ್ಬಾಲ್ ಆಟದಲ್ಲಿಯೂ ಯುವಕರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ.