ಭಾಗಮಂಡಲ, ಏ. 5: ಇಲ್ಲಿನ ಲ್ಯಾಂಪ್ಸ್ ಸಹಕಾರ ಸಂಘದÀ 2026-27ನೇ ಸಾಲಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸತತವಾಗಿ 4ನೇ ಬಾರಿ ಅಧ್ಯಕ್ಷರಾಗಿ ಕೆ.ಎ. ಮಿಟ್ಟು ರಂಜಿತ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಕೆ. ಸಿನೋಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಕೆ.ಕೆ. ಮಂಜುನಾಥ, ಕೆ.ಜಿ. ಪವನ್, ಪೂವಯ್ಯ ಕೆ.ಎಂ, ಶರಣು ಕೆ.ಬಿ, ಪ್ರದೀಪ್ ಎಂ.ಡಿ, ಯೋಗೇಶ್ ಎಂ.ಎಸ್, ನಾಣಯ್ಯ ಕೆ.ಎಂ, ಗಿರಿಜಾ ಕೆ.ವಿ ಹಾಗೂ ಸರೋಜಿನಿ ಕೆ.ಎಸ್. ಕಾರ್ಯನಿರ್ವಹಿಸಲಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಕೆ.ಎ. ಮಿಟ್ಟು ರಂಜಿತ್ ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಲಾಭದಾಯಕ ಹಾದಿಯಲ್ಲಿ ಕೊಂಡೊಯ್ಯಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು. ಸಂಘದ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ಮಡಿಕೇರಿ ಸಹಕಾರ ಇಲಾಖೆಯ ದ್ವಿ.ದ.ಸ. ಬಿ.ಜಿ. ಸಂದೀಪ್ ನಡೆಸಿಕೊಟ್ಟರು.

ಈ ಸಂದರ್ಭ ಸಂಘದ ಮಾಜಿ ನಿರ್ದೇಶಕರು, ಕರ್ನಾಟಕ ರಾಜ್ಯ ಲ್ಯಾಂಪ್ಸ್ ಫೆಡೆರೇಷನ್ ಮೈಸೂರು ಇದರ ಅಧ್ಯಕ್ಷರು, ನಿರ್ದೇಶಕರು ಹಾಗೂ ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷರು, ಸಂಘದ ಸಿಇಓ ಪೂರ್ಣಿಮ ಸಿಬ್ಬಂದಿಗಳಾದ ಧನ್ಯಶ್ರೀ ರಮೇಶ್ ಮುಂತಾದವರು ಹಾಜರಿದ್ದರು.