ನಾಪೋಕ್ಲು, ಏ. 5: ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸ್ಥಳಕ್ಕೆ ತೆರಳಿ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದುಕೊಂಡರು. ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು. ಪೋಷಕರೊಂದಿಗೆ ಮಾತನಾಡಿ ಸ್ಥೈರ್ಯ ತುಂಬಿದÀರು.

ಮಹಿಳೆ ಪತ್ತೆಯಾಗುವ ಸಮಯದ ತನಕವೂ ಸ್ಥಳದಲ್ಲಿದ್ದ ಪೊನ್ನಣ್ಣ ಅವರು, ಬಳಿಕ ಮಹಿಳೆಯ ಯೋಗಕ್ಷೇಮ ವಿಚಾರಿಸಿ ಅವರನ್ನು ವೀರಾಜಪೇಟೆ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು. ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಅರಣ್ಯ ಇಲಾಖೆ, ಎಎನ್‍ಎಫ್ ಅವರೊಂದಿಗೆ ಸ್ಥಳೀಯರು ಕೂಡ ಹುಡುಕಾಟ ನಡೆಸುತ್ತಿದ್ದರು. ಮಧ್ಯಾಹ್ನ ಹೊತ್ತಿಗೆ ಕೆಲ ತಂಡಗಳು ಹಿಂದಿರುಗಿದವು. ನಾಳಿನ ಕಾರ್ಯಾಚರಣೆಯ ಬಗ್ಗೆಯೂ ಸ್ಥಳೀಯರೊಂದಿಗೆ ಚರ್ಚಿಸಲಾಗುತ್ತಿತ್ತು. ಎಎನ್‍ಎಫ್‍ನ ಹೆಚ್ಚುವರಿ ತಂಡವನ್ನು ಕರೆಸಿಕೊಳ್ಳಲು ಮಾತುಕತೆ ನಡೆಸಲಾಗುತ್ತಿತ್ತು. ಈ ನಡುವೆ ಯುವತಿ ಪತ್ತೆಯಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ. ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಳಿಕ ಅವರ ಊರಿಗೆ ಪೊಲೀಸರು ಕರೆದೊಯ್ಯುತ್ತಾರೆ ಎಂದು ವಿವರಿಸಿದರು. ದಾರಿತಪ್ಪಿದ ಹಿನ್ನೆಲೆ ಬೆಟ್ಟದಲ್ಲಿ ಶರಣ್ಯ ಸಿಲುಕಿಕೊಂಡಿದ್ದರು. ಮೊಬೈಲ್ ಸ್ವಿಚ್ಛ್‍ಆಫ್ ಆದ ಕಾರಣ ಸುಳಿವು ಸಿಗಲಿಲ್ಲ. ನಿರಂತರ ಶೋಧದಿಂದ ಪತ್ತೆ ಸಾಧ್ಯವಾಯಿತು ಎಂದು ಸ್ಥಳದಲ್ಲಿದ್ದ ಸೂರಜ್ ಹೊಸೂರು ಮಾಹಿತಿ ನೀಡಿದರು.