ಕುಶಾಲನಗರ, ಏ. 4: ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ-2026 ಹಾಗೂ ಶ್ರೀ ದಯಾನಂದಪುರಿ ಮಹಾಸ್ವಾಮಿಗಳ 36ನೇ ವರ್ಷದ ಪಟ್ಟಾಭಿμÉೀಕ ಮಹೋತ್ಸವ ಮತ್ತು ಜಗದ್ಗುರುಗಳ ತುಲಾಭಾರ ಸಮಾರಂಭ ಮೇ 9 ರಿಂದ 2 ದಿನಗಳ ಕಾಲ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ಕ್ಷೇತ್ರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ “ಬೆಳಗಲೆಮ್ಮ ದೇವಾಂಗ ತತ್ವಮತ “ ಎಂಬ ನಾಮಾಂಕಿತ ದೊಂದಿಗೆ ದೇವಾಂಗ ಜ್ಯೋತಿಯ ಹೊತ್ತ ವಾಹನವನ್ನು ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿಯ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕುಶಾಲನಗರದ ರಥಬೀದಿಯಲ್ಲಿರುವ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ದೇವಾಂಗ ಜ್ಯೋತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನ ಆವರಣದಲ್ಲಿ ದೇವಾಂಗ ಜ್ಯೋತಿಯ ವಿಷಯದ ಬಗ್ಗೆ ಬನಶಂಕರಿ ಕ್ಷೇತ್ರದ ಪ್ರಮುಖರಾದ ಡಾ. ಯಲ್ಲಪ್ಪ ಮಾಹಿತಿಯನ್ನು ಒದಗಿಸಿದರು.

ಈ ಸಂದರ್ಭ ಕೊಡಗು ಜಿಲ್ಲೆಯ ನೇಕಾರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಕಾರ್ಯದರ್ಶಿ ಕೆ.ಕೆ. ನಾಗರಾಜಶೆಟ್ಟಿ, ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್, ಗೌರವಾಧ್ಯಕ್ಷ ಡಿ. ವಿಜಯೇಂದ್ರ, ಸಮಿತಿ ಪ್ರಮುಖರಾದ ಡಿ.ವಿ. ಚಂದ್ರು ರಾಮಚಂದ್ರ, ಅರುಣ್, ಗಣೇಶ್, ಶಾರÀದ, ಗೀತಾ ಸೋಮಶೇಖರ್, ರೂಪ ಕುಮಾರ್, ಮಂಜಳಾ ಗೋಪಾಲ್, ಶೋಭಾ ಕನಕ, ಸೇರಿದಂತೆ ಸಮಿತಿ ಸದಸ್ಯರು ಇದ್ದರು.