ಗೋಣಿಕೊಪ್ಪಲು, ಏ. 4: ಇತಿಹಾಸ ಪ್ರಸಿದ್ಧ ದಕ್ಷಿಣ ಕೊಡಗಿನ ಈಚೂರು ಕುಂದ ಗ್ರಾಮದ ಶ್ರೀ ಪಡುವೇರಿ ದಬ್ಬೇಚ್ಚಮ್ಮ ದೇವಸ್ಥಾನದ ವಾರ್ಷಿಕ ಉತ್ಸವ ಜರುಗಿತು. 8 ದಿನಗಳ ಕಾಲ ನಡೆದ ಊರಿನ ಉತ್ಸವದಲ್ಲಿ ಹತ್ತಾರು ರೀತಿಯ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿ ಜರುಗಿದವು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಗುಮ್ಮಟ್ಟಿರ, ತೀತಮಾಡ, ಮದ್ರಿರ, ಪಟ್ರಂಗಡ ಸೇರಿದಂತೆ ಇನ್ನಿತರ ಸುತ್ತಮುತ್ತಲಿನ ಹಲವು ಕುಟುಂಬ ಸದಸ್ಯರುಗಳು, ಭಕ್ತರು, ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ವಾರ್ಷಿಕ ಉತ್ಸವದಲ್ಲಿ ಶ್ರೀ ಪಡುವೇರಿ ದಬ್ಬೇಚ್ಚಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತೀತಮಾಡ ಕರುಂಬಯ್ಯ, ದೇವತಕ್ಕರಾದ ತೀತಮಾಡ ಉಮೇಶ್, ಚಂಗವಕ್ಕರಾದ ಗುಮ್ಮಟ್ಟಿರ ಕಿಲನ್ ಗಣಪತಿ, ಗಣ್ಯರಾದ ತೀತಮಾಡ ವಾಸು ಗಣಪತಿ, ತೀತಮಾಡ ಕುಶಾಲಪ್ಪ, ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ದೇವಾಲಯ ಅರ್ಚಕ ಹರೀಶ್ ಭಟ್ ಮತ್ತಿತರರು ಪಾಲ್ಗೊಂಡಿದ್ದರು.