ನಾಪೋಕ್ಲು, ಏ. 3: ಕೊಡಗಿನ ಅತಿ ಎತ್ತರದ ಶಿಖರವಾದ ತಡಿಯಂಡಮೋಳ್‍ಗೆ ಗುರುವಾರ ಹೋಗಿದ್ದ ಶರಣ್ಯ (36) ಬೆಟ್ಟದಿಂದ ಹಿಂತಿರುಗಿಲ್ಲದೆ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿದಿದೆ. ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ತಂಗಿದ್ದ ಕೇರಳದ ಶರಣ್ಯ ಒಬ್ಬಂಟಿಯಾಗಿ ಬಂದಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.

ಈ ಮಹಿಳೆ ಆನ್‍ಲೈನ್‍ನಲ್ಲಿ ಚಾರಣಕ್ಕಾಗಿ ಬುಕ್ ಮಾಡಿದ್ದು ನಿನ್ನೆ ದಿನ ಬೆಟ್ಟದಲ್ಲಿ ಆನೆಗಳ ಓಡಾಟವಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇತರ ಪ್ರವಾಸಿಗರೊಂದಿಗೆ ಕಳುಹಿಸಲಾಗಿತ್ತು. ಇತರರು ಸಂಜೆ ಹಿಂತಿರುಗಿದರೂ ಶರಣ್ಯ ಹಿಂತಿರುಗದಿದ್ದಾಗ, ಸಂಜೆ ಸ್ಥಳೀಯರು ಕುಡಿಯರ ಮುತ್ತಪ್ಪ ನೇತೃತ್ವದಲ್ಲಿ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿಯೊಡಗೂಡಿ ತಡರಾತ್ರಿಯವರೆಗೂ ಹುಡುಕಾಟ ನಡೆಸಿ ಬಳಿಕ ಇಂದು ಬೆಳಗ್ಗಿನಿಂದ ಮತ್ತೆ ಹುಡುಕಾಟ ಮುಂದುವರಿಸಿದರೂ ಮಹಿಳೆÉಯ ಸುಳಿವು ಲಭ್ಯವಾಗಲಿಲ್ಲ. ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಮತ್ತು ಪೆÇಲೀಸರು ಶುಕ್ರವಾರ ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸಿದರು. ನಾಪೆÇೀಕ್ಲು ಎಸ್.ಐ. ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿಯೊಂದಿಗೆ ಗ್ರಾಮಸ್ಥರೂ ನೆರವಾಗಿ ಹುಡುಕಾಟ ಮುಂದುವರಿಸಿದ್ದಾರೆ. ಕೊಡಗು ಎಸ್.ಪಿ. ಬಿಂದುಮಣಿ ಅವರ ಪ್ರಕಾರ, ಕಾಣೆಯಾದ ಮಹಿಳೆಯ ಕೇರಳದಲ್ಲಿರುವ ಕುಟುಂಬಕ್ಕೆ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದೆ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ. ಆಕೆ ಕೇರಳದಲ್ಲಿಯೇ ಉದ್ಯೋಗಿಯಾಗಿದ್ದಾರೆ ಎಂದು ಎಸ್.ಪಿ. ಖಚಿತಪಡಿಸಿದರು. ಮಡಿಕೇರಿ ಅರಣ್ಯ ಡಿಸಿಎಫ್ ಅಭಿμÉೀಕ್ ಅವರು ನೀಡಿದ ಮಾಹಿತಿ 4ಐದನೇ ಪುಟಕ್ಕೆ

(ಮೊದಲ ಪುಟದಿಂದ)ಹೀಗಿದೆ “ಐದು ಶೋಧ ತಂಡಗಳನ್ನು ರಚಿಸಲಾಗಿದೆ ಮತ್ತು ಇದರಲ್ಲಿ ಸ್ಥಳೀಯರೊಂದಿಗೆ ಪೆÇಲೀಸರ ಎರಡು ತಂಡಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ತಂಡಗಳು ಸೇರಿವೆ. ನಾವು ಎಲ್ಲಾ ಸಂಭಾವ್ಯ ಸ್ಥಳಗಳನ್ನು ಹುಡುಕುತ್ತಿದ್ದೇವೆ. ಶೋಧ ಕಾರ್ಯಕ್ಕೆ ಡ್ರೋನ್‍ಗಳನ್ನು ಬಳಸಲಾಗಿದೆ. ಶ್ವಾನ ದಳವೂ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ತಡಿಯಂಡಮೋಳ್ ಕಠಿಣ ಮಾರ್ಗವೇನೂ ಅಲ್ಲ ಮತ್ತು ದಾರಿ ತಪ್ಪದೆ ತಪ್ಪಲಿನಲ್ಲಿ ಸುಲಭವಾಗಿ ಹಿಂತಿರುಗಬಹುದಾದಂತಹ ಪ್ರದೇಶವಾಗಿದೆ. ಪೆÇಲೀಸರು ಕೂಡ ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ”.