ಮಡಿಕೇರಿ, ಏ. 3: ಮುತ್ತಪ್ಪ ಸೇವಾ ಸಂಘ ಬ್ರಹ್ಮಗಿರಿಪುರ ಕಾನೂರು ವತಿಯಿಂದ ಶ್ರೀ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವ ತಾ. 5,6 ರಂದು ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾ. 5 ರಂದು ಸಂಜೆ 5.30 ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, 6 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, 7.30 ಗಂಟೆಗೆ ಕುಟ್ಟಿಚಾತನ್ ವೆಳ್ಳಾಟಂ, ರಾತ್ರಿ 8 ಗಂಟೆಗೆ ಅನ್ನದಾನ, ರಾತ್ರಿ 9.30 ಗಂಟೆಗೆ ಕಂಡಕರ್ಣನ್ ವೆಳ್ಳಾಟಂ ನಡೆಯಲಿದೆ. ಬೆಳಗ್ಗಿನ ಜಾವ 2 ಗಂಟೆಗೆ ಗುಳಿಗನ್ ತೆರೆ, 3 ಗಂಟೆಗೆ ಕಂಡಕರ್ಣನ್ ತೆರೆ, 6 ಗಂಟೆಗೆ ಮುತ್ತಪ್ಪನ್ ತೆರೆ ನಡೆಯಲಿದ್ದು, ಬೆಳಿಗ್ಗೆ 11.50 ಗಂಟೆಗೆ ದೇವರ ಉತ್ಸವ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದೆ.