ಕಡಂಗ, ಏ.3: ತಾಜುಲ್ ಉಲಮಾ ಬದ್ರಿಯಾ ಮದರಸದಲ್ಲಿ ಪ್ರಸ್ತುತ ಅಧ್ಯಯನ ವರ್ಷದ ಫತ್ಹೆ ಮುಬಾರಕ್ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಎವಗ್ರ್ರೀನ್ ವಹಿಸಿದ್ದರು. ಮದರಸ ಪ್ರಾಂಶುಪಾಲರಾದ ಹುಸೈನ್ ಸಹದಿ ಮತ್ತು ಅಬ್ದುರಹಮಾನ್ ಸಹದಿಯವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಸಂದÀರ್ಭದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಅಬ್ದುರಜಾಕ್, ಆಡಳಿತ ಮಂಡಳಿ ಕೋಶಾಧಿಕಾರಿ ರಜಾಕ್ ಸಿ.ಎ , ಸಹದ್ ಎ.ಎಸ್, ಅಧ್ಯಾಪಕರದ ರಜಾಕ್ ಉಸ್ತಾದ್ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.