ಮಡಿಕೇರಿ, ಏ. ೨: ಮಡಿಕೇರಿ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯ ಆವರಣದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಇಂದು ನಡೆದವು.

ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ೯ಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಪ್ಪಾಭಿಷೇಕ, ೧೦ ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ೧೧ ಕ್ಕೆ ಶ್ರೀ ನಾಗದೇವರಿಗೆ ತಂಬಿಲ ಸಮರ್ಪಣೆ, ೧೧.೩೦ಕ್ಕೆ ಕಲಶಾಭಿಷೇಕ, ೧೨ ಕ್ಕೆ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.

ಸಂಜೆ ೪ ಕ್ಕೆ ಧ್ವಜಾರೋಹಣ ನಡೆಯಿತು. ೪.೩೦ ಕ್ಕೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಶ್ರೀ ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ ಹಾಗೂ ಹರಕೆ ಕೋಲಗಳು ನಡೆದವು.

ದೇವಾಲಯದ ಆಡಳಿತ ಮಂಡಳಿ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು.

ತಾ.೩ ರಂದು (ಇಂದು) ಸಂಜೆ ೫.೩೦ ಗಂಟೆಗೆ ಗಾಂಧಿ ಮೈದಾನದಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಕಲಾತಂಡ ಮತ್ತು ಚಂಡೆ ವಾದ್ಯಗಳ ಸಹಿತ ಆಕರ್ಷಕ ವಿದ್ಯುತ್ ಅಲಂಕೃತ ಮಂಟಪಗಳೊAದಿಗೆ ಕಲಶ ಹಾಗೂ ತಾಲಾಪೋಲಿ ಮೆರವಣಿಗೆ ನಡೆಯಲಿದೆ.