ಮಡಿಕೇರಿ, ಏ. ೨: ಮಡಿಕೇರಿಯ ಆಂಜನೇಯ ದೇಗುಲದಲ್ಲಿ ಇಂದು ಹನುಮ ಜಯಂತಿ ಉತ್ಸವ ವನ್ನು ವಿಧ್ಯುಕ್ತವಾಗಿ ಆಚರಿಸಲಾಯಿತು.
ರಾಮತಾರಕ ಹೋಮ ಹಾಗೂ ಪವಮಾನ ಕಲಶಾಭಿ ಷೇಕವನ್ನು ಓಂಕಾರೇಶ್ವರ ವ್ಯವಸ್ಥಾಪನಾ ಸಮಿತಿ ಮೂಲಕ ಅರ್ಚಕರುಗಳಾದ ಮೈಸೂರಿನ ಪ್ರಸನ್ನ ಭಟ್, ಮಡಿಕೇರಿಯ ರಾಮಕೃಷ್ಣ ಭಟ್, ಸುರೇಶ್ ಭಟ್, ಸುಬ್ರಹ್ಮಣ್ಯ ಭಟ್ ಹಾಗೂ ಸಮಿತಿ ಸದಸ್ಯರೂ ಹಾಗೂ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ನೆರವೇರಿಸಿದರು. ನಗರದ ಭಕ್ತಾದಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಶ್ರೀ ಆಂಜನೇಯ ಭಜನಾ ಮಂಡಳಿಯಿAದ ಮಹೇಶ್ ಕುಮಾರ್ ನೇತೃತ್ವದಲ್ಲಿ ಹನುಮಾ ಚಾಲೀಸ್ ಮತ್ತಿತರ ಭಜನೆಗಳನ್ನು ನಡೆಸಲಾಯಿತು.
ಸಾರ್ವಜನಿಕರಿಗೆ ಕೋಸಂಬರಿ, ಪಾನಕ ಮತ್ತು ಉಪಾಹಾರ ಏರ್ಪಡಿಸಲಾಗಿತ್ತು. ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ವಿಶಾಲ್ ನಂದಕುಮಾರ್, ಅಂಬೆಕಲ್ ಕುಶಾಲಪ್ಪ, ಜಿ. ರಾಜೇಂದ್ರ ಹಾಗೂ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ಹಾಜರಿದ್ದರು. ಈ ಸಂದರ್ಭ ಭಕ್ತಾದಿಗಳಾದ ಶಿವಯ್ಯ ಮತ್ತು ಜಯಂತಿ ದಂಪತಿ ಆಂಜನೇಯ ಪ್ರತಿಮೆಗೆ ಮುತ್ತಿನ ಹಾರ ಅರ್ಪಣೆಗೈದರು.