ವೀರಾಜಪೇಟೆ, ಏ. ೨: ನಗರದಲ್ಲಿ ವೀರಾಜಪೇಟೆಯ ಹನುಮ ಜಯಂತಿ ಆಯೋಜನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶೋಭಾಯಾತ್ರೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿAದ ಜರುಗಿತು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಹನುಮ ಭಕ್ತರು ಶೋಭಾಯಾತ್ರೆ-ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಯಾತ್ರೆ ಸಾಗಿಹೋದ ರಸ್ತೆಗಳು ಕೇಸರಿಮಯವಾಗಿ ಕಂಗೊಳಿಸಿದವು. ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಾಂಜನೇಯ ದೇವಾಸ್ಥಾನದಲ್ಲಿ ಮಧ್ಯಾಹ್ನ ೨ ಗಂಟೆಗೆ ಪೂಜೆ ನೆರವೇರಿದ ಬಳಿಕ ಹನುಮನ ಮೂರ್ತಿ ಹೊತ್ತ ರಥಕ್ಕೆ ಚಾಲನೆ ದೊರೆಯಿತು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಪೂಜೆ ಸಲ್ಲಿಸಿ ಈಡುಗಾಯಿ ಹಾಕುವುದರ ಮೂಲಕ ಚಾಲನೆ ನೀಡಿದರು. ವಿವಿಧ ಚಂಡೆಮೇಳ ಹಾಗೂ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಹೊತ್ತ ರಥದ ವಾಹನದೊಂದಿಗೆ ಮೆರವಣಿಗೆ ಮೂಲಕ ನಗರದ ಛತ್ರಕೆರೆ ಸಮೀಪವಿರುವ ವೀರಾಂಜನೇಯ ದೇವಸ್ಥಾನದವರೆಗೆ ಸಾಗಿತು. ಅಲ್ಲಿ ವೀರಾಂಜನೇಯ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಮೂಲಕ ಸಾಗಿಬಂದು ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಾಲಯದವರೆಗೆ ಸಾಗಿ ಬಂದಿತು. ಬಳಿಕ ಮಾರಿಯಮ್ಮ ದೇವಾಲಯದ ಬಳಿ ಸಂಗಮಗೊAಡಿತು. ಅಪಾರ ಜನಸ್ತೋಮದೊಂದಿಗೆ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ತೆಲುಗರ ಬೀದಿ ಮೂಲಕ ದೊಡ್ದಟ್ಟಿ ಚೌಕಿ, ಗಡಿಯಾರ ಕಂಬದಿAದ ಖಾಸಗಿ ಬಸ್ಸು ನಿಲ್ದಾಣ, ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಮೂಲಕ ಮತ್ತೆ ದೊಡ್ದಟ್ಟಿ ಚೌಕಿ, ಗಡಿಯಾರ ಕಂಬ, ಕಾರು ನಿಲ್ದಾಣದ ಮೂಲಕ ಶೋಭಾಯಾತ್ರೆ ಸಾಗಿ ಬಂದು ತಾಲೂಕು ಮೈದಾನದಲ್ಲಿ ಜಮಾವಣೆ ಗೊಂಡಿತು. ನಗರದುದ್ದಕ್ಕೂ ಓಂ, ಹನುಮ, ರಾಮ ಭಾವಚಿತ್ರದ ಕೇಸರಿ ಧ್ವಜಗಳು ರಾರಾಜಿಸಿದವು. ಕೇಸರಿ ಮಾಲೆ, ಪೇಟ ಹಾಕಿದ್ದ ಬಹುತೇಕರು ಕೈಯಲ್ಲಿ ಭಗವಾಧ್ವಜ ಹಿಡಿದು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು.
ಗೊಂಬೆಕುಣಿತ, ಡೊಳ್ಳು,, ಚಂಡೆಮೇಳ, ನಾಸಿಕ್ ಬ್ಯಾಂಡ್, ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭಜನಾ ಕುಣಿತ, ಆಡಿವಾಸಿಗಳ ನೃತ್ಯ, ಸೇರಿ ನಾಡಿನ ಅನೇಕ ಜನಪದ ಕಲಾತಂಡಗಳು ಶೋಭಾಯಾತ್ರೆಗೆ ಮೆರುಗು ತಂದವು. ಅಲಂಕೃತ ಆಂಜನೇಯ ಮೂರ್ತಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಮಹಿಳೆಯರು ಮತ್ತು ಪುರುಷರು ಪ್ರತ್ಯೇಕ ಡಿಜೆ ವ್ಯವಸ್ಥೆಯಡಿ ಕುಣಿದು ಕುಪ್ಪಳಿಸಿದರು. ಎದೆ ಝಲ್ ಎನ್ನಿಸುವ ಡಿಜೆ ಶಬ್ದ ರಸ್ತೆ ಬದಿಯ ಕಟ್ಟಡಗಳನ್ನು ನಡುಗಿಸಿದಂತಿತ್ತು. ರಸ್ತೆ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೇರಿ ಸಾರ್ವಜನಿಕರು ಶೋಭಾಯಾತ್ರೆ ವೀಕ್ಷಿಸಿದರು. ರಾಮ ಹಾಗೂ ಹನುಮನ ವಿವಿಧ ಕಥಾ ಸಾರಾಂಶಗಳನ್ನು ಒಳಗೊಂಡ ಸ್ತಬ್ಧಚಿತ್ರ ಅತ್ಯಂತ ಆಕರ್ಷಕವಾಗಿತ್ತು. ಯಾತ್ರೆ ಸಾಗುವ ಮಾರ್ಗದಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಶಾಂತಿ ಸುವ್ಯವಸ್ಥೆಗೆ ಖಾಕಿಯ ಭದ್ರ ಕೋಟೆಯೇ ಇತ್ತು. ಕೇಸರಿ ಶಾಲು ಹಾಕಿಕೊಂಡು, ಕೈಯಲ್ಲಿ ಹನುಮ ಧ್ವಜ ಹಿಡಿದ ಭಕ್ತರು, ಮೆರವಣಿಯುದ್ದಕ್ಕೂ ‘ಜೈ ಶ್ರೀರಾಮ್, ಹನುಮಾನ್ ಕೀ ಜೈ’ ಎಂದು ಘೋಷಣೆ ಕೂಗುತ್ತಾ, ವಾದ್ಯ, ತಮಟೆ, ನಗಾರಿ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಉತ್ಸವ ಮೂರ್ತಿಗೆ ಪೂಜೆ
ಮೆರವಣಿಗೆ ಆರಂಭವಾಗುತ್ತಿದ್ದAತೆ ತಂಡೋಪತAಡವಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದರು. ಮಹಡಿ ಮೇಲೆ ನಿಂತು ಪಟ್ಟಣದ ನಾಗರಿಕರು ಮೆರವಣಿಗೆಯನ್ನು ಕಣ್ತುಂಬಿಕೊAಡರು. ದಾರಿಯುದ್ದಕ್ಕೂ ಹನುಮನಿಗೆ ಪೂಜೆ ಸಲ್ಲಿಸಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಂದರ್ಭ ಹನುಮ ಜಯಂತಿ ಆಯೋಜನಾ ಸಮಿತಿ ಅಧ್ಯಕ್ಷ ಅಂಜಪರವAಡ ಅನಿಲ್ ಮಂದಣ್ಣ, ವೀರಾಜಪೇಟೆ ನಗರದ ಹನುಮ ಜಯಂತಿ ಆಯೋಜನಾ ಸಮಿತಿಯ ಸಾಮಾಜಿಕ ಜಾಲತಾಣದ ಶಿನೋಜ್, ಜಂಟಿ ಕಾರ್ಯದರ್ಶಿ ಪ್ರದೀಪ್ ರೈ, ಉಪಾಧ್ಯಕ್ಷರಾದ ಶಾನ್ ಚಂಗಪ್ಪ, ಹೇಮಂತ್, ಜಂಟಿ ಕಾರ್ಯದರ್ಶಿ ಶಶಿಕುಮಾರ್, ಸುಮೇಶ್, ಖಜಾಂಚಿ ಸುರೇಶ್, ಸಮಿತಿಯ ಕಾನೂನು ಸಲಹೆಗಾರರಾದ ಪುಲಿಯಂಡ ಪೊನ್ನಣ್ಣ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಸುಮೇಶ್ ಪಿ.ಜಿ. ಹಾಗೂ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಹಿಂದೂ ಬಾಂಧವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.