*ಗೋಣಿಕೊಪ್ಪ, ಏ. ೨: ಮಹಿಳೆಯರ ಸ್ವಾವಲಂಬಿ ಬದುಕಿಗೆ ಕೌಶಲ್ಯಯುತ ವೃತ್ತಿ ಸಹಕಾರಿ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಂದು ತಿಂಗಳು ನಡೆದ ಮಹಿಳೆಯರ ಕೌಶಲ್ಯಾ ಶಿಬಿರದ ಮುಕ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಸ್ವಉದ್ಯೋಗದ ಮೂಲಕ ತನ್ನ ಜೀವನದ ಹಾದಿಯನ್ನು ಸುಗಮವಾಗಿಸಬೇಕು ಎಂದು ಹೇಳಿದರು. ಜ್ಞಾನವಿಕಾಸ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸೀರೆಗೆ ಕುಚ್ಚು ಹಾಕುವುದು, ಸೀರೆ ಮಡುಚುವುದು, ಮದುಮಗಳಿಗೆ ಶೃಂಗಾರ ಸೇರಿದಂತೆ ವಿವಿಧ ಕೌಶಲ್ಯಭರಿತ ತರಬೇತಿಯನ್ನು ನೀಡಲಾಯಿತು.

ಮುಖ್ಯ ತರಬೇತುದಾರರಾಗಿ ರಶ್ಮಿ, ಮಂಜುಳಾ, ಕ್ಷೇತ್ರ ಸಮನ್ವಯಾಧಿಕಾರಿ ಉಷಾರಾಣಿ, ಯೋಜನೆಯ ಲೆಕ್ಕ ಪರಿಶೋಧಕ ಸಂತೋಷ್ ನಾಯಕ್, ಸೇವಾ ಪ್ರತಿನಿಧಿ ವಿಮಲಾ ಮಹಿಳೆಯರಿಗೆ ತರಬೇತಿ ನೀಡಿದರು. ತರಬೇತಿಯಲ್ಲಿ ಪಾಲ್ಗೊಂಡವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಪ್ರಮಾಣ ಪತ್ರ ವಿತರಿಸಿದರು.