ಮಡಿಕೇರಿ, ಏ. ೨: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಸಹಕಾರದೊಂದಿಗೆ ಮಡಿಕೇರಿ ಯೂತ್ ಕ್ಲಬ್(ಎಂವೈಸಿಸಿ) ವತಿಯಿಂದ ಮಂಗಳೂರು ವಿಭಾಗದ ಬಾಲಕ ಹಾಗೂ ಬಾಲಕಿಯರ ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಪೊನ್ನಚನ ಮಧು ಸೋಮಣ್ಣ; ಬಾಲಕರ ವಿಭಾಗದ ೧೪, ೧೬ ಮತ್ತು ೧೯ ವರ್ಷದೊಳಗಿನವರ ವಿಭಾಗದವರಿಗೆ ತಾ.೬ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಾಲಕಿಯರ ೧೫ ಮತ್ತು ೧೯ ವರ್ಷದೊಳಗಿನವರ ವಿಭಾಗಕ್ಕೆ ತಾ. ೭ರಂದು ನಡೆಯಲಿದೆ. ಒಂದೊAದು ತಂಡಗಳಿಗೆ ೧೫ ಮಂದಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುವದು. ಬೆಂಗಳೂರಿನಿAದ ಪರಿಣಿತ ಆಯ್ಕೆದಾರರು ಆಯ್ಕೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಆಯ್ಕೆಯಾದ ಆಟಗಾರರಿಗೆ ಎರಡು ದಿನಗಳ ತರಬೇತಿ ನೀಡಲಾಗುವದು. ನಂತರ ತಂಡಗಳು ತಾ.೧೦ರಿಂದ ೧೩ರವರೆಗೆ ಮಂಗಳೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಆಸಕ್ತ ಆಟಗಾರರು ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಹತ್ತನೇ ತರಗತಿ ಅಂಕಪಟ್ಟಿ ಸೇರಿದಂತೆ ಇತರ ದಾಖಲೆಗಳ ಮೂಲ ಪ್ರತಿಗಳೊಂದಿಗೆ ಹಾಜರಾಗಬೇಕು. ಈ ಬಾರಿ ಗ್ರಾಮೀಣ ವಿಭಾಗದ ಆಟಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮರಗೋಡು ಶಾಲಾ ಮೈದಾನದಲ್ಲಿ ಆಯ್ಕೆ ಶಿಬಿರ ಏರ್ಪಡಿಸಲಾಗಿದೆ. ಎರಡು ದಿನಗಳ ಕಾಲ ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಶಾಲಾ ಪರೀಕ್ಷೆ ಇದ್ದಲ್ಲಿ ಅಂತಹ ಬಾಲಕರು ತಾ. ೭ರಂದು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮಧು ಸೋಮಣ್ಣ (೯೮೮೦೩೮೧೮೩೧), ಅಜಯ್ (೯೯೪೫೦೫೬೩೭೩) ಇವರುಗಳನ್ನು ಸಂಪರ್ಕಿಸಬಹುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ಎಂ.ಎA. ಸುನಿಲ್, ಖಜಾಂಚಿ ಎ.ಎಂ. ಅಜಯ್, ಉಪಾಧ್ಯಕ್ಷ ಎಂ.ಕೆ. ಪ್ರಿನ್ಸ್ ಕುಟ್ಟಪ್ಪ ಇದ್ದರು.