ಕೂಡಿಗೆ, ಏ. ೨: ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ರಾಮನವಮಿ ಮತ್ತು ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ದೇವಸ್ಥಾನದ ಸಭಾಂಗಣದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ಶ್ರಧ್ಧಾಭಕ್ತಿಯಿಂದ ಆಚರಿಸ ಲಾಯಿತು. ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿ ಕಾರ್ಯಕ್ರಮದ ಬಗ್ಗೆ ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್ ಮಾತನಾಡಿದರು.

ಈ ಸಂದರ್ಭ ಸಮಿತಿ ಗೌರವಾಧ್ಯಕ್ಷ ಟಿ.ಡಿ ವಿಜಯೇಂದ್ರ , ಪ್ರಮುಖರಾದ ಡಿ.ಎಸ್ ಮಹೇಶ್, ಆನಂದ್, ಪುನೀತ್, ಕಿರಣ್ ಕುಮಾರ್, ನಿರಂಜನ್, ಮಹಿಳಾ ಸಮಿತಿಯ ಅಧ್ಯಕ್ಷೆ ಪದ್ಮ ಮಹೇಶ, ಖಜಾಂಚಿ ರೂಪ ಕುಮಾರ್, ಗೀತಾ ಸೋಮಶೇಖರ್, ಶೋಭಾ ಸೋಮಶೆಟ್ಟಿ ಹಾಗೂ ಯುವಕ ಸಂಘದ ಗಣೇಶ್ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು. ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಹಾಜರಿದ್ದವರಿಗೆ ರಾಮನವಮಿ ಅಂಗವಾಗಿ ಕೋಸಂಬರಿ, ಪಾನಕಗಳ ವಿತರಣೆ ನಡೆಯಿತು.