ಸೋಮವಾರಪೇಟೆ, ಏ. ೨: ರೋಟರಿ ಸಂಸ್ಥೆಯ ವತಿಯಿಂದ ಸ್ಥಳೀಯ ರೋಟರಿ ಭವನದಲ್ಲಿ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ತನ್ಮಯೀ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಮಹಿಳೆಯರಿಗೆ ಅವಕಾಶ, ಗೌರವ ಮತ್ತು ಬೆಂಬಲ ನೀಡಿದಾಗ ಸಮಾಜವು ಇನ್ನಷ್ಟು ಪ್ರಗತಿ ಕಾಣುತ್ತದೆ.

ಮಹಿಳೆಯರು ಶಕ್ತಿಯ ಪ್ರತಿರೂಪ. ಅವರು ಕೇವಲ ಕುಟುಂಬದ ಆಧಾರಸ್ತಂಭ ಮಾತ್ರವಲ್ಲ, ಸಮಾಜದ ಅಭಿವೃದ್ಧಿಯ ಪ್ರಮುಖ ಶಕ್ತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷೆ ವೀಣಾ ಮನೋಹರ್ ವಹಿಸಿದ್ದರು. ವೇದಿಕೆಯಲ್ಲಿ ವಲಯ ಸೇನಾನಿ ರಾಕೇಶ್ ಪಟೇಲ್, ೨೦೨೬-೨೭ನೇ ಸಾಲಿನ ವಲಯ ಸೇನಾನಿ ಎ.ಎಸ್. ಮಲ್ಲೇಶ್, ನೂತನ ರೋಟರಿ ಅಧ್ಯಕ್ಷ ಬಿ.ಎಸ್. ಸುಂದರ್, ಕಾರ್ಯದರ್ಶಿ ಡಿ.ಪಿ. ರಮೇಶ್ ಇದ್ದರು. ರೋಟರಿ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.