ನಾಪೋಕ್ಲು, ಏ. ೨: ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ವ್ಯಾಪ್ತಿಯ ಅಂತರ ಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ಯೆಲ್ಲೋ ತಂಡವನ್ನು ಮಣಿಸಿ ನಾಪೋಕ್ಲು ಎ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಕ್ರೀಡಾ ಕಲರವಕ್ಕೆ ವರ್ಣರಂಜಿತ ತೆರೆ ಬಿದ್ದಿದೆ.

ಉಭಯ ತಂಡಗಳ ತೀವ್ರ ಸೆಣಸಾಟದಿಂದ ಫೈನಲ್ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಪಂದ್ಯದಲ್ಲಿ ಎರಡೂ ತಂಡಗಳು ೨-೨ ಗೋಲುಗಳ ಸಮಬಲ ಸಾಧಿಸಿದವು. ಬಲ್ಲಮಾವಟಿ ತಂಡದ ಪರ ಆಟಗಾರರಾದ ನೆರವಂಡ ಕವನ್, ಕುಶಾಲ್ ಬೋಪಯ್ಯ ತಲಾ ಒಂದು ಗೋಲು ಗಳಿಸಿದರು.ನಾಪೋಕ್ಲು ತಂಡದ ಪರ ಕೆಲೇಟಿರ ಮುತ್ತಣ್ಣ ಹಾಗೂ ಕುಲ್ಲೇಟಿರ ನಾಚಪ್ಪ ಗೋಲು ದಾಖಲಿಸಿದರು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ನಾಪೋಕ್ಲು ಎ ತಂಡವು ಬಲ್ಲಮಾವಟಿ ಯೆಲ್ಲೋ ತಂಡದ ವಿರುದ್ಧ ೪-೨ ಅಂತರದ ಗೆಲುವು ಸಾಧಿಸಿ ನಾಲ್ನಾಡ್ ಕಪ್ ತನ್ನದಾಗಿಸಿಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಯವಕಪಾಡಿ ತಂಡವನ್ನು ಸೋಲಿಸಿ ನಾಪೋಕ್ಲು ಎ ಫೈನಲ್ ಪ್ರವೇಶಿಸಿತು. ೪-೧ ಗೋಲುಗಳ ಅಂತರದಿAದ ವಿಜಯಿಯಾಯಿತು. ಎರಡನೇ ಸೆಮಿಫೈನಲ್ ಪಂದ್ಯ ನಾಪೋಕ್ಲು ಬಿ ಮತ್ತು ಬಲ್ಲಮಾವಟಿ ಯೆಲ್ಲೋ ನಡುವೆ ನಡೆದು ಬಲ್ಲಮಾವಟಿ ಯೆಲ್ಲೋ ತಂಡ ೬- ೦ ಅಂತರದಿAದ ಭರ್ಜರಿ ಜಯ ಸಾಧಿಸಿತು. ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲ್ಲಮಾವಟಿ ಮತ್ತು ನಾಪೋಕ್ಲು ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣೆಸಾಟ ನಡೆದು ನಾಪೋಕ್ಲು ತಂಡ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಸಭಾ ಕಾರ್ಯಕ್ರಮ

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ.ನಾಣಯ್ಯ, ೩೫ ನಾಡ್‌ಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ನಾಲ್ನಾಡ್ ೧೫ ಗ್ರಾಮಗಳನ್ನು ಒಳಗೊಂಡು ಪ್ರಸಿದ್ಧಿ ಪಡೆದಿದೆ. ಇಲ್ಲಿ ನಾಲ್ನಾಡ್ ಕಪ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಪ್ರತಿ ವರ್ಷ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವುದರಿಂದ ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ಹೊರಬರಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ರಾಜ್ಯ, ರಾಷ್ಟç ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ಆಶಿಸಿದರು. ಅಕ್ರಮ ಸಕ್ರಮ ಸಮಿತಿ ತಾಲೂಕು ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ, ನಾಲ್ನಾಡ್ ಕಪ್ ಹಾಕಿ ಪಂದ್ಯಾವಳಿಯು ಕೇವಲ ಗ್ರಾಮೀಣ ಮಟ್ಟಕ್ಕೆ ಸೀಮಿತವಾಗಬಾರದು. ಇದು ಜಿಲ್ಲಾಮಟ್ಟಕ್ಕೆ ವಿಸ್ತರಿಸಬೇಕು. ಮುಂದಿನ ವರ್ಷದ ಪಂದ್ಯಾವಳಿಯನ್ನು ಆಯೋಜಿಸಲು ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮುಂಡAಡ ದೇವಯ್ಯ ಮುಂದೆ ಬಂದಿದ್ದಾರೆ. ಪಂದ್ಯಾವಳಿಯ ಮೂಲಕ ಉತ್ತಮ ಆಟಗಾರರು ಹೊರಬರುವಂತಾಗಲಿ ಎಂದರು.

ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಒಲಂಪಿಯನ್ ಮನೆಯಪಂಡ ಸೋಮಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವ ಕುಮಾರ್, ದಾನಿ ತೋಲಂಡ ಸೋಮಯ್ಯ, ಬೊಟ್ಟೋಳಂಡ ಸದಾ, ನಾಪೋಕ್ಲು ಕೊಡವ ಸಮಾಜ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಕೂಪದಿರ ಗಣಪತಿ, ಉದ್ಯಮಿ ಮಂಡಿರ ದೇವಿ, ಕ್ಲಬ್‌ನ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಖಜಾಂಚಿ ಚೀಯಂಡಿ ದಿನೇಶ್, ಸಹಕಾರ್ಯದರ್ಶಿ ಮಚ್ಚುರ ಯದುಕುಮಾರ್, ಹಾಗೂ ನಿರ್ದೇಶಕರು ಮತ್ತು ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

ಟೂರ್ನಿ ಡೈರೆಕ್ಟರ್ ಆಗಿ ಕರವಂಡ ಅಪ್ಪಣ್ಣ, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಚೈಯಂಡ ಅಪ್ಪಚ್ಚು, ಪಟ್ರಪಂಡ ಮಂದಣ್ಣ, ಕೊಳುವಂಡ ಚಂಗಪ್ಪ, ಕುಪ್ಪಂಡ ದಿಲನ್, ಅನ್ನಡಿಯಂಡ ಪೊನ್ನಪ್ಪ, ತಾಂತ್ರಿಕ ಸಮಿತಿಯಲ್ಲಿ ವಿನೋದ್ (ಜೆಸಿಬಿ) ಕಾರ್ಯ ನಿರ್ವಹಿಸಿದರು. ನುಚ್ಚಿಮಣಿಯಂಡ ರಸಿತಾ ಮುತ್ತಣ್ಣ ಪ್ರಾರ್ಥಿಸಿ , ಕ್ಲಬ್ ಸಂಚಾಲಕ ಎ.ಕೆ. ಮನು ಮುತ್ತಪ್ಪ ಸ್ವಾಗತಿಸಿದರು. ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು. - ದುಗ್ಗಳ ಸದಾನಂದ