ಚೆಯ್ಯಂಡಾಣೆ, ಏ. ೨: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಮ್ಮೆಮಾಡು ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಸಂಕಷ್ಟ ಎದುರಿಸುತ್ತಿದ್ದ ಸಂಘದ ಸದಸ್ಯರೊಬ್ಬರ ಪತಿಗೆ ವಾಕರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಪೋಕ್ಲು ಶುಭಾಷ್‌ನಗರ ಕಾರ್ಯಕ್ಷೇತ್ರದ ಎಮ್ಮೆಮಾಡು ಗ್ರಾಮದ ಅಲ್ ಅನ್ಸಾರ್ ಸಂಘದ ಸದಸ್ಯರಾದ ಆಮಿನ ಎಂಬವರ ಪತಿ ಕರೀಂ ಎಂಬವರು ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಕಷ್ಟಕರವಾಗಿದ್ದು ಸಂಘದಿAದ ವಾಕರ್ ಕೊಡಿಸುವಂತೆ ಸಂಘದ ಸದಸ್ಯೆಯಾಗಿರುವ ಪತ್ನಿ ಆಮಿನ ಅವರು ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುರುಷೋತ್ತಮ್ ಅವರಿಗೆ ಮನವಿ ಸಲ್ಲಿಸಿದ್ದರು.

ಮನವಿಯನ್ನು ಸ್ವೀಕರಿಸಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಸಂಘದ ಮೇಲ್ವಿಚಾರಕರಾದ ಸುನಿಲ್ ಅವರು ಕರೀಂ ಅವರ ಮನೆಗೆ ಭೇಟಿ ನೀಡಿ ವಾಕರ್‌ಅನ್ನು ವಿತರಿಸಿದರು.

ಈ ಸಂದರ್ಭ ನಾಪೋಕ್ಲು ಸುಭಾಷ್‌ನಗರ ಒಕ್ಕೂಟದ ಅಧ್ಯಕ್ಷೆ ಮುತ್ತುರಾಣಿ, ಸೇವಾ ಪ್ರತಿನಿಧಿ ಉಮಾಲಕ್ಷಿö್ಮ, ಸಂಘದ ಸದಸ್ಯೆ ಮಿಶ್ರಿಯ ಹಾಜರಿದ್ದರು.