ಗೋಣಿಕೊಪ್ಪಲು, ಏ. ೨: ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯ ಹಾತೂರು, ಕೊಳತ್ತೋಡು-ಬೈಗೋಡು ಗ್ರಾಮದ ಶ್ರೀ ಮಹಾದೇವರ ಮತ್ತು ಮಹಾವಿಷ್ಣು ದೇವಾಲಯದ ವಾರ್ಷಿಕ ಉತ್ಸವ ಹಾಗೂ ಊರ ಹಬ್ಬ ಸಂಭ್ರಮದಿAದ ಜರುಗಿತು. ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿರುವ ಈ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ತಂತ್ರಿಗಳಾದ ಪುತ್ತೂರುವಿನ ಮೋಹನ್ ಭಟ್ ಹಾಗೂ ದೇವಾಲಯದ ಅರ್ಚಕರಾದ ಅನಂತಭಟ್, ಪೂಜಾಕೈಂಕರ್ಯಗಳನ್ನು ನಡೆಸಿದರು. ವಾರ್ಷಿಕೋತ್ಸವದ ಅಂಗವಾಗಿ ಎತ್ತುಪೋರಾಟ, ಕಾಯಿಗೆ ಗುಂಡು ಹೊಡೆಯುವುದು. ವಾಲಗತ್ತಾಟ್ ಪೈಪೋಟಿ, ತೂಚಂಬಲಿ, ದೇವರ ನೃತ್ಯ, ರಂಗಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮಹಾಪೂಜೆ ನಡೆದವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವಾಲಯ ಆಡಳಿಯ ಮಂಡಳಿಯ ಅಧ್ಯಕ್ಷ ಕೇಳಪಂಡ ಬಾಬು ಉತ್ತಪ್ಪ, ಕಾರ್ಯದರ್ಶಿ ದಿನೇಶ್ ದೇವಯ್ಯ, ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ವಾರ್ಷಿಕ ಉತ್ಸವವು ಸಂಭ್ರಮದಿAದ ಜರುಗಿತು.