ವಾಷಿಂಗ್‌ಟನ್, ಏ.೨: ೫ ದಶಕಗಳ ಬಳಿಕ ಮತ್ತೇ ಚಂದ್ರನೆಡೆಗೆ ಮಾನವನು ಸಾಗಿದ ಐತಿಹಾಸಿಕ ಕ್ಷಣಕ್ಕೆ ಅಮೇರಿಕಾ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಆರ್ಟಿಮಿಸ್-೨ ಯಶಸ್ವಿ ಉಡಾವಣೆಯು ಸಾಕ್ಷಿಯಾಯಿತು.
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿAದ ಅಲ್ಲಿನ ಸ್ಥಳೀಯ ಸಮಯ ಏಪ್ರಿಲ್ ೧ ಸಂಜೆ ೬:೩೫(ಭಾರತೀಯ ಸಮಯ ಏಪ್ರಿಲ್ ೨ರ ಮುಂಜಾನೆ ೩:೫೫)ಕ್ಕೆ ಸರಿಯಾಗಿ ೪ ಗಗನಯಾತ್ರಿಕರನ್ನು ಹೊತ್ತ ಒರಯನ್ ನೌಕೆಯು ಎಸ್.ಎಲ್.ಎಸ್ ರಾಕೆಟ್ ಸಹಕಾರದಲ್ಲಿ ಉಡಾವಣೆಗೊಂಡಿತು.
ಯಶಸ್ವಿ ಉಡಾವಣೆ ಬಳಿಕ ನಿಗದಿತ ಎತ್ತರ ತಲುಪಿದ ಬಳಿಕ ಗಗನಯಾತ್ರಿಕರನ್ನು ಒಳಗೊಂಡ ಒರಯನ್ ನೌಕೆಯು ‘ಸಿಂಗಲ್-ಯೂಸ್‘ ರಾಕೆಟ್‌ನಿಂದ ಬೇರ್ಪಟ್ಟಿತು. ನೌಕೆಯು ನಂತರ ನಿಗದಿತ ಭೂ-ಕಕ್ಷೆ ಸೇರಿತು. ತಾ.೩ ರಂದು (ಇಂದು) ಭೂ-ಕಕ್ಷೆಯಿಂದ ಹೊರಬಂದು ನೌಕೆಯು ಚಂದ್ರನತ್ತ ಮುಖ ಮಾಡಲಿದೆ. ಸುಮಾರು ೪ ದಿನಗಳ ಕಾಲ ೩ ಲಕ್ಷಕ್ಕೂ ಅಧಿಕ ದೂರ ಕ್ರಮಿಸಿ ಚಂದ್ರನ ಕಕ್ಷೆ ಸೇರಲಿದೆ. ಚಂದ್ರನನ್ನು ಒಂದು ಸುತ್ತು ಪರಿಭ್ರಮಿಸಿದ ಬಳಿಕ ಭೂಮಿಯತ್ತ ಮುಖಮಾಡಿ ೪ ದಿನಗಳ ಕಾಲ ಕ್ರಮಿಸಿ ಭೂ-ಕಕ್ಷೆ ಸೇರಿದ ಬಳಿಕ ಪೆಸಿಫಿಕ್ ಮಹಾಸಾಗರದಲ್ಲಿ ನೌಕೆಯು ಬಂದಿಳಿಯುವ ನಿರೀಕ್ಷೆಯಿದೆ. ಗಗನಯಾತ್ರಿಕರಾದ ಕಮಾಂಡರ್ ರೀಡ್ ವೈಸ್‌ಮ್ಯಾನ್, ಪೈಲೆಟ್ ವಿಕ್ಟರ್ ಗ್ಲೋವರ್, ಮಿಷನ್ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸ್ಪೆಷಲಿಸ್ಟ್ ಕ್ರಿಸ್ಟೀನಾ ಕೋಚ್ ಹಾಗೂ ಜೆರೆಮಿ ಹ್ಯಾನ್‌ಸನ್ ಸದ್ಯ ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.
ಈ ಯೋಜನೆಯು ನೌಕೆ, ರಾಕೆಟ್ ಹಾಗೂ ಇತರ ಎಲ್ಲ ತಾಂತ್ರಿಕ ಪರಿಕರಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಲಿದೆ. ಮುಂದಿನ ವರ್ಷ ಆರ್ಟಿಮಿಸ್-೩ ಮೂಲಕ ಇದೇ ೪ ಗಗನಯಾತ್ರಿಕರು ಚಂದ್ರನಲ್ಲಿ ಕಾಲಿಡುವ ಐತಿಹಾಸಿಕ ಕ್ಷಣಕ್ಕೆ ಪ್ರಸ್ತುತ ಯೋಜನೆ ಸಹಕಾರಿಯಾಗಲಿದೆ. ಯೋಜನೆಯ ಒಟ್ಟು ವೆಚ್ಚ ರೂ.೩೭ ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.
ಶುಭಾಶಯ ಹೇಳಿದ ಟ್ರಂಪ್
ಐತಿಹಾಸಿಕ ಕ್ಷಣಕ್ಕೆ ನಾಸಾ ಗಗನಯಾತ್ರಿಕರು ಸಾಕ್ಷಿಯಾಗಿದ್ದಾರೆ. ಯೋಜನೆಯು ಸಂಪೂರ್ಣ ಯಶಸ್ವಿಯಾಗಲಿ ಎಂಬುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಗನಯಾತ್ರಿಕರಿಗೆ ಶುಭಾಶಯ ಹೇಳಿದರು.
ರಿಯಲ್ ಟೈಮ್ ಟ್ರಾö್ಯಕಿಂಗ್
hಣಣಠಿs://ತಿತಿತಿ.ಟಿಚಿsಚಿ.gov/missioಟಿs/ಚಿಡಿಣemis-ii/ಚಿಡಿoತಿ/ ವೆಬ್‌ಸೈಟ್ ಮೂಲಕ ಗಗನಯಾತ್ರಿಕರಿರುವ ನೌಕೆಯನ್ನು ಟ್ರಾö್ಯಕ್ ಮಾಡಬಹುದಾಗಿದೆ. ಉತ್ತಮ ವಿನ್ಯಾಸದ ಮೂಲಕ ಭೂಮಿ, ಚಂದ್ರ ಹಾಗೂ ನೌಕೆಯು ಪ್ರಸ್ತುತ ಪರಿಭ್ರಮಿಸುತ್ತಿರುವ ಸ್ಥಳ, ದೂರ, ವೇಗ ಎಲ್ಲವನ್ನೂ ವೆಬ್‌ಸೈಟ್‌ನ ಪೇಜ್‌ನಲ್ಲಿ ‘ರಿಯಲ್ ಟೈಮ್’ ಆಗಿ ನಡೆಯುತ್ತಿರುವಂತೆಯೇ ವರ್ಚುವಲ್ ಆಗಿ ಪ್ರದರ್ಶಿಸಲಾಗಿದೆ. ನೌಕೆಯು ಗಂಟೆಗೆ ಅಂದಾಜು ೩ ರಿಂದ ೫ ಸಾವಿರ ಕಿ.ಮೀ ವೇಗದಲ್ಲಿ ಭೂ-ಕಕ್ಷೆಯನ್ನು ಪರಿಭ್ರಮಿಸುತ್ತಿದೆ.