ವಾಷಿAಗ್‌ಟನ್, ಮಾ. ೩೧: ಚಂದ್ರನೆಲಕ್ಕೆ ಗಗನಯಾತ್ರಿಕರನ್ನು ಕಳುಹಿಸುವ ಅಮೇರಿಕಾ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ಮಹಾತ್ವಾಕಾಂಕ್ಷೆಯ ಆರ್ಟಿಮಿಸ್ ಯೋಜನೆಯ ೨ನೇ ಹಂತದ ‘ಆರ್ಟಿಮಿಸ್-೨’ ಉಡಾವಣೆ ಇಂದು (ತಾ.೧ ರಂದು) ನಡೆಯಲಿದೆ. ನಾಸಾದ ೪ ಗಗನಯಾತ್ರಿಕರು ಚಂದ್ರಲೋಕಕ್ಕೆ ಅಂತರಿಕ್ಷ ನೌಕೆಯಲ್ಲಿ ಸಾಗಲಿದ್ದಾರೆ. ಕಮಾಂಡರ್ ರೀಡ್ ವೈಸ್‌ಮ್ಯಾನ್, ಪೈಲೆಟ್ ವಿಕ್ಟರ್ ಗ್ಲೋವರ್, ಮಿಷನ್ ಸ್ಪೆಷಲಿಸ್ಟ್ ಕ್ರಿಸ್ಟೀನಾ ಕೋಚ್ ಹಾಗೂ ಜೆರೆಮಿ ಹ್ಯಾನ್‌ಸನ್ ಅವರುಗಳು ನೌಕೆಯಲ್ಲಿ ಸಾಗಿ ಚಂದ್ರನ ಕಕ್ಷೆ ಪ್ರದಕ್ಷಿಸಿ ಭೂಮಿಗೆ ಮರಳಲಿದ್ದಾರೆ.
ಗಗನಯಾತ್ರಿಕರನ್ನು ಹೊತ್ತ ಒರಯನ್ ಬಾಹ್ಯಾಕಾಶ ನೌಕೆಯು ನಾಸಾದ ಎಸ್.ಎಲ್.ಎಸ್ ರಾಕೆಟ್ ಸಹಕಾರದಲ್ಲಿ ಉಡಾವಣೆಗೊಳ್ಳಲಿದೆ. ಯು.ಎಸ್.ಎ ಫ್ಲೋರಿಡಾ ರಾಜ್ಯದ ಕೆನೆಡಿ ಬಾಹ್ಯಾಕಾಶ ಕೇಂದ್ರದಿAದ ನೌಕೆಯು ಅಲ್ಲಿನ ಸ್ಥಳೀಯ ಸಮಯ ಏಪ್ರಿಲ್ ೧ (ಇಂದು) ಸಂಜೆ ೬:೨೪ಕ್ಕೆ (ಭಾರತ ಸಮಯ ಏಪ್ರಿಲ್ ೨ ಮುಂಜಾನೆ ೩:೫೪ ಗಂಟೆ) ಉಡಾವಣೆಯಾಗಲಿದೆ. ನೇರ ಪ್ರಸಾರ hಣಣಠಿs://ತಿತಿತಿ.ಥಿouಣube.ಛಿom/ಟಿಚಿsಚಿ ನಲ್ಲಿ ವೀಕ್ಷಿಸಬಹುದಾಗಿದೆ.
ಉಡಾವಣೆಗೊಂಡ ನೌಕೆಯು ಕೆಲಕಾಲ ಭೂ-ಪ್ರದಕ್ಷಿಸಿದ ಬಳಿಕ ಚಂದ್ರನೆಡೆಗೆ ಮುಖ ಮಾಡಲಿದೆ.
ಸರಾಸರಿ ೩ ಲಕ್ಷ ಕಿ.ಮೀ ದೂರವಿರುವ ಚಂದ್ರನ ಕಕ್ಷೆ ತಲುಪಲು ಅಂದಾಜು ೪ ದಿನಗಳ ಕಾಲಾವಧಿ ಅಗತ್ಯವಿದೆ. ಬಳಿಕ ಚಂದ್ರನನ್ನು ಪ್ರದಕ್ಷಿಸಿ ಭೂಮಿಯೆಡೆಗೆ ನೌಕೆಯು ಮುಖಮಾಡಿ ೪ ದಿನಗಳಲ್ಲಿ ವಾಪಸ್ಸು ತಲುಪಲಿದೆ. ಅಂದಾಜು ೮ ರಿಂದ ೧೦ ದಿನಗಳ ಯೋಜನೆ ಇದಾಗಿದ್ದು, ಚಂದ್ರನ ಕಕ್ಷೆಯನ್ನು ನೌಕೆ ಪ್ರದಕ್ಷಿಸಲಿದೆ ಹೊರತು ಗಗನಯಾತ್ರಿಕರು ಚಂದ್ರನೆಲವನ್ನು ಸ್ಪರ್ಶಿಸುವ ಯೋಜನೆ ಆರ್ಟಿಮಿಸ್-೨ರ ಗುರಿಯಲ್ಲ. ೨೦೨೭ರ ಆರ್ಟಿಮಿಸ್-೩ ರಲ್ಲಿ ಗಗನಯಾತ್ರಿಕರು ಚಂದ್ರನೆಲವನ್ನು ಸ್ಪರ್ಶ ಮಾಡಲಿದ್ದಾರೆ. ಆರ್ಟಿಮಿಸ್-೧ರಲ್ಲಿ ಕೇವಲ ನೌಕೆ ಮಾತ್ರ ಚಂದ್ರಲೋಕವನ್ನು ಸುತ್ತಿ ಯಶಸ್ವಿಯಾಗಿ ವಾಪಸ್ಸಾಗಿತ್ತು. ೧೯೬೯ ರಿಂದ ೧೯೭೨ರ ಅವಧಿಯಲ್ಲಿ ಒಟ್ಟು ೬ ಬಾರಿ ಅಮೇರಿಕಾ ಕೈಗೊಂಡ ಚಂದ್ರÀ್ರ ಪ್ರವಾಸದಲ್ಲಿ ೧೨ ಗಗನಯಾತ್ರಿಕರು ಚಂದ್ರನೆಲ ಸ್ಪರ್ಶಿಸಿದ್ದರು. ಇದು ಕಳೆದು ಇದೀಗ ೫ ದಶಕಗಳು ಸಂದ ನಂತರ ಮತ್ತೇ ಅನ್ಯಲೋಕದತ್ತ ಗಗನಯಾತ್ರಿಕರು ತೆರಳಲಿದ್ದಾರೆ. ಅಂದು ಕೇವಲ ಕುತೂಹಲ ಹಾಗೂ ಇತರ ದೇಶಗಳು ಚಂದ್ರ ತಲುಪುವ ಮುನ್ನ ನಾವು ತೆರಳಬೇಕೆಂಬ ಛಲದಲ್ಲಿ ಚಂದ್ರನೆಡೆಗೆ ನಾಸಾ ಗಗನಯಾತ್ರಿಕರು ಚಂದ್ರಲೋಕಕ್ಕೆ ತೆರಳಿದ್ದರು. ಆದರಿದೀಗ ಕೈಗೊಂಡಿರುವ ಆರ್ಟಿಮಿಸ್ ಯೋಜನೆ ಹಾಗೂ ಅದರ ಮುಂದುವರಿದ ಹಂತಗಳಲ್ಲಿ ಚಂದ್ರನೆಲದಲ್ಲಿ ಶಾಶ್ವತ ಸೂರು ಪಡೆದು ನೆಲೆಸುವ ಯೋಜನೆಯನ್ನು ಕೂಡ ನಾಸಾ ರೂಪಿಸಿದೆ.