ಮಡಿಕೇರಿ, ಮಾ. ೩೦: ಕ್ರೀಡಾ ತವರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಕಲರವ ಜೋರಾಗುತ್ತಿದೆ. ಜಿಲ್ಲೆಯಾದ್ಯಂತ ವಿವಿಧ ರೀತಿಯ ಕ್ರೀಡಾಕೂಟಗಳು ಆರಂಭಗೊಳ್ಳುತ್ತಿವೆ. ಸಮುದಾಯಗಳು ಆಟೋಟ ಆಯೋಜನೆಗೆ ಅಣಿಯಾಗಿವೆ. ಇದರೊಂದಿಗೆ ೨೩ ವರ್ಷಗಳ ಐತಿಹ್ಯ ಹೊಂದಿರುವ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ಆರಂಭಕ್ಕೆ ದಿನಗಣನೆ ಆರಂಭಗೊAಡಿದೆ. ಮುಕ್ಕಾಟಿರ (ಬೇತ್ರಿ) ೨೪ನೇ ವರ್ಷದ ಕ್ರಿಕೆಟ್ ಪಂದ್ಯಾಟದ ಆತಿಥ್ಯ ವಹಿಸಿಕೊಂಡಿದ್ದು, ಸಿದ್ಧತೆ ಭರದಿಂದ ಸಾಗುತ್ತಿದೆ.
ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣ, ಪಾಂಡಾಣೆ ಮೈದಾನ ಸೇರಿದಂತೆ ಅರಮೇರಿ ಕಳಂಚೇರಿ ಮಠದ ಮೈದಾನದಲ್ಲಿ ಈ ಬಾರಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ಕ್ರಿಕೆಟ್ ಮೂರ್ನಾಡಿನಲ್ಲಿ ಆಯೋಜಿಸಿರುವುದು ಮತ್ತೊಂದು ವಿಶೇಷವಾಗಿದೆ. ಈಗಾಗಲೇ ಮೂರು ಮೈದಾನಗಳ ಮಾರ್ಕಿಂಗ್ ಕಾರ್ಯ ನಡೆಯುತ್ತಿದ್ದು, ಕ್ರೀಡಾಭಿಮಾನಿಗಳು ಕುಳಿತುಕೊಳ್ಳಲು ಎಲ್ಲಾ ಮೈದಾನದಲ್ಲಿ ಗ್ಯಾಲರಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ದಾಖಲೆಯ ತಂಡ ನೋಂದಣಿ
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ರಿಕೆಟ್ ಆಯೋಜಕರು ಸಿದ್ಧತೆಯ ಕುರಿತು ಮಾಹಿತಿ ನೀಡಿದ್ದು, ಪುರುಷರ ಕ್ರಿಕೆಟ್‌ಗೆ ೨೮೯ ತಂಡ, ಮಹಿಳಾ ವಿಭಾಗದಲ್ಲಿ ಈ ತನಕ ೪೬ ತಂಡಗಳು ನೋಂದಾಯಿಸಿಕೊAಡಿದ್ದು, ಈ ಹಿಂದಿನ ನೋಂದಣಿಯ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.
ಕುಟುಂಬದ ವಕ್ತಾರ ರವಿ ಚೀಯಣ್ಣ ಮಾತನಾಡಿ, ಏಪ್ರಿಲ್ ೩ ರಿಂದ ಮೇ ೧ ರ ತನಕ ಪಂದ್ಯಾವಳಿ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಹಾಗೂ ಅರಮೇರಿ ಮೈದಾನದಲ್ಲಿ ನಡೆಯಲಿದೆ. ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ಮಹಿಳಾ ಕ್ರಿಕೆಟ್ ಮಾತ್ರ ನಡೆಯಲಿದೆ. ಪುರುಷರ ವಿಭಾಗದ ಟೈಸ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಹಿಳಾ ತಂಡಗಳ ನೋಂದಾಣಿಯನ್ನು ಏಪ್ರಿಲ್ ೪ರವರಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
೬ ಓವರ್‌ಗಳು - ನಿತ್ಯ ೧೪ ಪಂದ್ಯ
ಪ್ರತಿ ಪಂದ್ಯ ೬ ಓವರ್‌ಗಳಿಗೆ ನಡೆಯಲಿದ್ದು, ಒಂದು ಮೈದಾನದಲ್ಲಿ ೭ ಪಂದ್ಯದAತೆ ೨ ಮೈದಾನದಲ್ಲಿ ಒಟ್ಟು ೧೪ ಪಂದ್ಯಗಳನ್ನು ನಡೆಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ ಎಂದು ಕ್ರೀಡಾಕೂಟದ ಮಾಧ್ಯಮ ಸಂಯೋಜಕ ಮುಕ್ಕಾಟಿರ ಉತ್ತಮ್ ಬೋಪಣ್ಣ ವಿವರಿಸಿದರು.
ಮಹಿಳಾ ಕ್ರಿಕೆಟ್ ಪಾಂಡಾಣೆ ಮೈದಾನದಲ್ಲಿ ನಡೆಯಲಿದ್ದು, ತಂಡಗಳ ಸಂಖ್ಯೆಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆಧಾರದಲ್ಲಿ ನಿತ್ಯ ಪಂದ್ಯವನ್ನು ನಿರ್ಧರಿಸಿ ಟೈಸ್ ತಯಾರಿಸಲಾಗುವುದು. ಏಪ್ರಿಲ್ ೧೫ರ ನಂತರ ಮಹಿಳಾ ಕ್ರಿಕೆಟ್ ಆರಂಭಗೊಳ್ಳಲಿದ್ದು, ಪ್ರಿ ಕ್ವಾರ್ಟರ್ ಹಂತದ ನಂತರ ಮೂರ್ನಾಡಿನ ವಿದ್ಯಾಸಂಸ್ಥೆಯ ಮೈದಾನದಲ್ಲಿ ಪಂದ್ಯಾಟ ಮುಂದುವರೆಯಲಿದೆ. ದಿನನಿತ್ಯ ಬೆಳಿಗ್ಗೆ ೮ ಗಂಟೆಯಿAದ ಸಂಜೆ ೫ ಗಂಟೆಯ ತನಕ ಕ್ರಿಕೆಟ್ ನಡೆಯಲಿದೆ. ಈ ಬಾರಿ ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ನೀಡಿದ ಹಿನ್ನೆಲೆ ಹೆಚ್ಚಿನ ತಂಡಗಳು ನೋಂದಾಯಿಸಿಕೊAಡಿವೆ. ಮಹಿಳಾ ಪಂದ್ಯಾಟಕ್ಕೆ ಮತ್ತಷ್ಟು ತಂಡಗಳು ನೋಂದಾಯಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊದಲ ದಿನ ಸೌತ್ ಕೂರ್ಗ್ ಹಾಗೂ ನಾರ್ತ್ ಕೂರ್ಗ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ಹೇಳಿದರು. ಪುರುಷ ಹಾಗೂ ಮಹಿಳಾ ಕ್ರಿಕೆಟ್ ವಿಜೇತ ತಂಡಕ್ಕೆ ತಲಾ ರೂ. ೧ ಲಕ್ಷ ನಗದು ಬಹುಮಾನ, ಪುರುಷರ ವಿಭಾಗದ ರನ್ನರ್ ಅಪ್ ತಂಡಕ್ಕೆ ರೂ. ೭೫ ಸಾವಿರ, ಮಹಿಳಾ ತಂಡಕ್ಕೆ ರೂ. ೫೦ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮಧು ದೇವಯ್ಯ, ಕಾರ್ಯದರ್ಶಿ ಭಜನ್ ಬೋಪಣ್ಣ ಹಾಜರಿದ್ದರು.