ಮಡಿಕೇರಿ, ಮಾ. ೩೦: ಕೊಡಗು ಹೆಗ್ಗಡೆ ಜನಾಂಗದ ಕ್ರೀಡಾ ಕೂಟದ ಪೂರ್ವಭಾವಿ ಸಭೆಯು ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಕೊರಕುಟ್ಟಿರ ಸರ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವರ್ಷದ ಕ್ರೀಡಾಕೂಟವು ಏಪ್ರಿಲ್ ೩೦ ರಿಂದ ಮೇ ೩ ರವರೆಗೆ ಹಾತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಯಿತು. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಜನಾಂಗ ಬಾಂಧವರನ್ನು ಭೌಗೋಳಿಕವಾಗಿ ಒಂಬತ್ತು ವಲಯಗಳನ್ನಾಗಿ ವಿಂಗಡಿಸಿ ಈ ವಲಯಗಳಿಂದ ಸೀನಿಯರ್ ವಿಭಾಗದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ೨೦ ತಂಡಗಳು ಕಿರಿಯರ ಕ್ರಿಕೆಟ್ ನಲ್ಲಿ ೮ ತಂಡಗಳು, ಹಗ್ಗಜಗ್ಗಾಟದಲ್ಲಿ ಪುರುಷರ ೯, ಮಹಿಳೆಯರ ೯ ತಂಡಗಳು, ಮಹಿಳಾ ಥ್ರೋ ಬಾಲ್‌ನಲ್ಲಿ ೧೨ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.
ಕ್ರೀಡಾ ಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾ ನವನ್ನು ನೀಡಲಾಗುತ್ತಿದೆ.ಜನಾಂಗ ಬಾಂಧವರಿಗೆ ಸ್ಟಾಲ್ ಗಳನ್ನು ಇಡಲು ಅವಕಾಶವಿದ್ದು ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ವಿವಿಧ ಕ್ರೀಡಾ ತಂಡಗಳು ಏಪ್ರಿಲ್ ೨೦ ರೊಳಗೆ ಕ್ರೀಡಾ ತಂಡಗಳನ್ನು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಭೆಯಲ್ಲಿ ಕ್ರೀಡಾ ಕೂಟದ ಸಂಚಾಲಕ ಪಂದಿಕAಡ ನಾಗೇಶ್ ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಪಡಿಞರಂಡ ಪ್ರಭು ಕುಮಾರ್, ಖಚಾಂಚಿ ಕೊರಂಡ ನಾಣಯ್ಯ, ನಿರ್ದೇಶಕರುಗಳಾದ ಮೂರೀರ ಕುಶಾಲಪ್ಪ, ಕೊಂಗೆಪ್ಪAಡ ರವಿರಘು, ಮುಳ್ಳಡ ಸುಥಾ, ಮೂರೀರ ಶಾಂತಿ, ಪೊಟ್ಟಂಡ ವಸಂತಿ, ಪ್ರಮುಖರಾದ ಕುಶಾಲನಗರ ಕೊಡಗು ಹೆಗ್ಗಡೆ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಚಳಿಯಂಡ ಯಶ್ವಂತ್, ಹಿರಿಯ ಕ್ರೀಡಾಪಟುಗಳಾದ ಕೊಂಗೆಪAಡ ಅರುಣ್, ಬೈರಿಕುಂದಿರ ಮನು, ಪಡಿಞರಂಡ ಗಿರೀಶ್, ಮುಂತಾದವರು ಹಾಜರಿದ್ದರು.