ಸೋಮವಾರಪೇಟೆ, ಮಾ. ೩೦: ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಹಾನಗಲ್ಲು ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ವಕೀಲರಾದ ಎಚ್.ಆರ್. ಪವಿತ್ರ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಪವಿತ್ರ, ಮಹಿಳೆಯರು ಮತ್ತೊಬ್ಬ ಮಹಿಳೆಯನ್ನು ಗೌರವದಿಂದ ಕಾಣಬೇಕು. ಕುಟುಂಬ ವ್ಯವಸ್ಥೆಯನ್ನು ಬಲಪಡಿಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಿಕೊಡುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಕಾರ್ಯದರ್ಶಿ ಸುವಿನಾ ಕೃಪಾಲ್, ಹಿರಿಯ ಸದಸ್ಯರಾದ ಸುಮತಿ ಗುರುಪ್ರಸಾದ್, ಮೈಸೂರು ನಾರ್ತ್ ಕ್ಲಬ್ ಮಾಜಿ ಅಧ್ಯಕ್ಷೆ ನಂದಿನಿ ಪ್ರಭುದೇವ್, ಕವಿತಾ ವಿರೂಪಾಕ್ಷ, ಸಂಧ್ಯಾ ಕೃಷ್ಣಪ್ಪ, ಆಶಾ ಯೋಗೇಂದ್ರ, ಪ್ರೇಮಾ ಹೃಷಿಕೇಶ್, ನಯನಾ ಪುರಷೋತ್ತಮ್, ಲತಾ ಮಂಜು, ಅಮ್ರಿತಾ ಕಿರಣ್, ನಂದಿನಿ ಗೋಪಾಲ್, ಚಿತ್ರಾ ಬೋಜರಾಜ್ ಇದ್ದರು. ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು