ಶನಿವಾರಸAತೆ, ಮಾ. ೨೯: ಸಮೀಪದ ಮಾದೇಗೋಡು ಗ್ರಾಮದ ನೂತನ ಶ್ರೀ ಮಾರಿಯಮ್ಮ ದೇವಾಲಯದ ೪೮ನೇ ದಿನದ ಮಂಡಲ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯೊಂದಿಗೆ ಸಂಪನ್ನವಾಯಿತು.ಮಾದೇಗೋಡು, ಗೋಪಾಲಪುರ, ಒಡೆಯನಪುರ, ಶನಿವಾರಸಂತೆ, ಸುತ್ತಮುತ್ತಲಿನ ಸಾವಿರಾರು ಮಂದಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಬೆಳಿಗ್ಗೆ ಶ್ರೀ ಮಾರಿಯಮ್ಮನಿಗೆ ಪುಣ್ಯಾಹ ಅಭಿಷೇಕ, ಅಲಂಕಾರಗಳು, ಪೂಜೆ, ಮಹಾಮಂಗಳಾರತಿ ನಡೆದು ತೀರ್ಥ-ಪ್ರಸಾದ ವಿನಿಯೋಗವಾಯಿತು. ನಂತರ ಭಂಟನಿಗೆ ಬಲಿ (ಹರಕೆ) ಪೂಜೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮ ಮುಖಂಡರು ಹಾಜರಿದ್ದರು.