ನಾಪೋಕ್ಲು, ಮಾ. ೨೯: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ನಾಲ್ನಾಡ್ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಭಾನುವಾರದ ಪಂದ್ಯಗಳಲ್ಲಿ ನಾಪೋಕ್ಲು ಬ್ಲೂ, ಯವಕಪಾಡಿ ಮರಂದೋಡ , ಕುಂಜಿಲ ಹಾಗೂ ನಾಪೋಕ್ಲು ಬ್ಲೂ ತಂಡಗಳು ಮುನ್ನಡೆ ಸಾಧಿಸಿದವು.

ದೊಡ್ಡ ಪುಲಿಕೋಟು ಮತ್ತು ಯವಕಪಾಡಿ ತಂಡದÀ ನಡುವೆ ನಡೆದ ಪಂದ್ಯದಲ್ಲಿ ಯವಕಪಾಡಿ ತಂಡವು ದೊಡ್ಡಪುಲಿಕೋಟು ತಂಡದ ವಿರುದ್ಧ ೩- ೧ ಅಂತರದಿAದ ಜಯ ಸಾಧಿಸಿತು. ದೊಡ್ಡ ಪುಲಿಕೋಟು ಪರವಾಗಿ ಅನೀಶ್. ಯವಕಪಾಡಿ ಪರವಾಗಿ ದಿಲನ್, ಹೇಮಂತ್ , ಬೋಪಣ್ಣ ತಲಾ ಒಂದೊAದು ಗೋಲನ್ನು ಗಳಿಸಿದರು.

ಮರಂದೋಡ ಮತ್ತು ನಾಲಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮರಂದೋಡ ತಂಡವು ನಾಲಡಿ ತಂಡದ ವಿರುದ್ಧ೨-೦ ಅಂತರದ ಜಯ ಸಾಧಿಸಿತು. ಮರಂದೋಡ ತಂಡದ ಪರವಾಗಿ ಆಟಗಾರರಾದ ಬಿದ್ದಪ್ಪ ಮತ್ತು ಚಿಣ್ಣಪ್ಪ ತಲಾ ಒಂದು ಗೋಲು ಗಳಿಸಿದರು.

ಪೇರೂರು ಮತ್ತು ಕುಂಜಿಲ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂಜಿಲ ತಂಡವು ೪-೦ ಅಂತರದಿAದ ಪೇರೂರು ತಂಡದ ವಿರುದ್ಧ ಜಯ ಸಾಧಿಸಿತು. ಕುಂಜಿಲ ತಂಡದ ಆಟಗಾರರಾದ ನಾಚಪ್ಪ, ಕಾರ್ಯಪ್ಪ , ಕಿರಣ್ ಮತ್ತು ಡಿವಿನ್ ತಲಾ ಒಂದು ಗೋಲು ಗಳಿಸಿದರು.

ಬಲ್ಲಮಾವಟಿ ವೈಟ್ ಮತ್ತು ನಾಪೋಕ್ಲು (ಎ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಎ ತಂಡ ಭರ್ಜರಿ ಏಳು ಗೋಲುಗಳ ಜಯ ಸಾಧಿಸಿತು. ನಾಪೋಕ್ಲು ಎ ಪರವಾಗಿ ಆಕಾಶ್, ಪುನೀತ್, ನಾಚಪ್ಪ, ಅವನಿಶ್, ಕಾಳಪ್ಪ, ಸುಬ್ರಮಣಿ, ಮತ್ತು ನಿರುಪ್ ತಲಾ ಒಂದೊAದು ಗೋಲನ್ನು ಗಳಿಸಿದರು.

ಬೇತು ಮತ್ತು ನಾಪೋಕ್ಲು ಬ್ಲೂ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಬ್ಲೂ ತಂಡವು ಬೇತು ತಂಡದ ವಿರುದ್ಧ ೩ -೨ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಬೇತು ಪರವಾಗಿ ಅಕ್ಷಿತ್ ಮತ್ತು ಬೋಪಣ್ಣ, ನಾಪೋಕ್ಲು ಬ್ಲೂ ಪರವಾಗಿ ಪೆಮ್ಮಯ್ಯ, ರೋಹನ್ ಲೋಕೇಶ್ ಗೋಲು ಗಳಿಸಿದರು. ಮೊದಲ ಪಂದ್ಯ ವನ್ನು ಉದ್ಘಾಟಿಸಿದ ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಗ್ರಾಮೀಣ ಪ್ರದೇಶದ ಇಂತಹ ಕ್ರೀಡಾಕೂಟಗಳಿಂದ ಜನಾಂಗ ಬಾಂಧವರು ಒಗ್ಗೂಡಲು ಸಹಕಾರಿಯಾಗುತ್ತದೆ ಎಂದರು. ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಮತ್ತು ಪದಾಧಿಕಾರಿಗಳು ಹಾಗೂ ನಿರ್ದೇಶಕರು ಮತ್ತು ಕ್ರೀಡಾ ಪ್ರೇಮಿಗಳು ಪಾಲ್ಗೊಂಡಿದ್ದರು. ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು. ಟೂರ್ನಿ ಡೈರೆಕ್ಟರ್ ಕರವಂಡ ಅಪ್ಪಣ್ಣ, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಚೈಯಂಡ ಅಪ್ಪಚ್ಚು, ಪಟ್ರಪಂಡ ಮಂದಣ್ಣ, ಕೊಳುವಂಡ ಚಂಗಪ್ಪ, ಕುಪ್ಪಂಡ ದಿಲನ್, ಅನ್ನಡಿಯಂಡ ಪೊನ್ನಪ್ಪ , ತಾಂತ್ರಿಕ ಸಮಿತಿ ವಿನೋದ್ (ಜೆಸಿಬಿ) ಇವರುಗಳು ನಿರ್ವಹಿಸಿದರು.

- ದುಗ್ಗಳ ಸದಾನಂದ