ಮಡಿಕೇರಿ, ಮಾ. ೨೯: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾದ ಸಬ್ ಜೂನಿಯರ್ ಹಾಕಿ ರಾಜ್ಯ ಮಟ್ಟದ ಆಯ್ಕೆ ಶಿಬಿರದಲ್ಲಿ ಕೊಡಗು ವಿದ್ಯಾಲಯದ ೧೦ನೇ ತರಗತಿಯ ಮೂವರು ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮಡಿಕೇರಿ ನಿವಾಸಿ ಕನ್ನಂಡ ಕೆ.ಎಂ. ಪೊನ್ನಪ್ಪ ಹಾಗೂ ನಳಿನಿ ದಂಪತಿಯ ಪುತ್ರಿ ವರ್ಣ ಬೋಜಮ್ಮ, ನಾಪೋಕ್ಲುವಿನ ಕಲಿಯಂಡ ಬೋಪಣ್ಣ ಹಾಗೂ ನೀತು ದಂಪತಿ ಪುತ್ರಿ ತೇಜಲ್ ಬೋಪಣ್ಣ ಮತ್ತು ಚೆಟ್ಟಳ್ಳಿಯ ಕೆಚ್ಚೆಟ್ಟಿರ ಮೊಣ್ಣಯ್ಯ ಹಾಗೂ ಮುತ್ತಮ್ಮ ದಂಪತಿಯ ಪುತ್ರಿ ಲಕ್ಷö್ಯ ಪೊನ್ನಕ್ಕ ಇವರುಗಳು ಬೆಂಗಳೂರಿನ ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಕ್ರೀಡಾ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ. ಏಪ್ರಿಲ್ ೧ರಿಂದ ೬ರವರೆಗೆ ರಾಂಚಿಯಲ್ಲಿ ನಡೆಯಲಿರುವ ಸಬ್‌ಜೂನಿಯರ್ ರಾಷ್ಟಿçÃಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಇವರುಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.