ಮಡಿಕೇರಿ, ಮಾ. ೨೭: ಮಡಿಕೇರಿ ತಾಲೂಕಿನ ಹೊದ್ದೂರು ಕಣ್ಣ ಬಲಮುರಿ ಗ್ರಾಮದಲ್ಲಿ ಕೊಡಗಿನ ಪವಿತ್ರ ಕಾವೇರಿ ನದಿ ದಂಡೆಯ ಎಡಭಾಗದಲ್ಲಿ ನೆಲೆಸಿರತಕ್ಕಂತಹ ಶ್ರೀ ಮಾರಿಯಮ್ಮ ತಾಯಿಯ ದೇವಾಲಯದ ೧೨ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವ ಮಾ.೩೦, ೩೧ ಹಾಗೂ ಏಪ್ರಿಲ್ ೧ ರಂದು ನಡೆಯಲಿದೆ.
ಮಾ.೩೦ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ಅಪರಾಹ್ನ ೩ ಗಂಟೆಗೆ ದೇವಾಲಯದಿಂದ ಮೂರ್ನಾಡಿನವರೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ದೇವಿಯ ಮೆರವಣಿಗೆ ನಡೆಯಲಿದೆ.
ಮಾ.೩೧ ರಂದು ಅರ್ಚಕರ ಮನೆಯಲ್ಲಿ ಪೂಜೆ ಸಲ್ಲಿಸಿ ಅಪರಾಹ್ನ ೩ ಗಂಟೆಗೆ ವಾಟೆಕಾಡುವಿನಿಂದ ಹೊರಟು ಬಲಮುರಿಯ ದೇವಾಲಯದವರೆಗೆ ವಾದ್ಯಗೋಷ್ಠಿಯೊಂದಿಗೆ ಪ್ರತಿ ಮನೆಯಿಂದ ಶ್ರೀ ದೇವಿಗೆ ಹಣ್ಣುಕಾಯಿ ಪೂಜೆ ಅರ್ಪಿಸಲಾಗುವುದು. ಸಂಜೆ ೫ ಗಂಟೆಗೆ ಕಾವೇರಿ ನದಿಯಲ್ಲಿ ಗಂಗಾಸ್ನಾನ, ನಂತರ ದೇವಿಯ ಮೆರವಣಿಗೆಯೊಂದಿಗೆ ದೇವಾಲಯ ಪ್ರದಕ್ಷಿಣೆ, ರಾತ್ರಿ ೯:೩೦ ಗಂಟೆಯಿAದ ದೇವಿಗೆ ಅಲಂಕಾರದೊAದಿಗೆ ಮಹಾಪೂಜೆ, ಮಂಗಳಾರತಿ, ಹೂವಿನ ವರ ಬೇಡುವಿಕೆ, ರಾತ್ರಿ ೧೦:೩೦ ಗಂಟೆಯಿAದ ವಾದ್ಯಗೋಷ್ಠಿಯೊಂದಿಗೆ ಪ್ರತಿ ಮನೆಯಿಂದ ಆರತಿ ಒಪ್ಪಿಸುವುದು ನಡೆಯಲಿದೆ.
ಏಪ್ರಿಲ್ ೧ ರಂದು ಬೆಳಿಗ್ಗೆ ೧೦ ಗಂಟೆಯಿAದ ೧:೩೦ರವರೆಗೆ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸುವುದು ನಡೆಯಲಿದೆ.
ಮಾ.೩೧ ರಾತ್ರಿ ಹಾಗೂ ಏಪ್ರಿಲ್ ೧ ರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ.
ದೇವಾಲಯಕ್ಕೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ. ಊರಿನಲ್ಲಿ ರೋಗ ರುಜಿನಗಳು ಬಂದಾಗ ಮತ್ತು ಸರಿಯಾದ ಕಾಲಕ್ಕೆ ಮಳೆ ಬೆಳೆಗಳು ಆಗದಿದ್ದಾಗ ಭಕ್ತಾದಿಗಳು ದೇವರಲ್ಲಿ ಬಂದು ಪ್ರಾರ್ಥಿಸಿಕೊಂಡು ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊAಡಿದ್ದಾರೆ. ಅಂದಿನಿAದ ಇಲ್ಲಿಯವರೆಗೂ ದೇವಿಯನ್ನು ಬಹಳ ಭಕ್ತಿಯಿಂದ ಪೂಜಿಸಿಕೊಂಡು ಬಂದಿದ್ದು ಕಳೆದ ೧೧ ವರ್ಷಗಳ ಹಿಂದೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಿ ಈಗ ೧೨ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ದೇವಾಲಯದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ.
ರೂ. ೫೫ ಲಕ್ಷ ವೆಚ್ಚದಲ್ಲಿ ಸಭಾಭವನ ನಿರ್ಮಿಸುವುದು ಮತ್ತು ಅರ್ಚಕರ ಕೊಠಡಿ ನಿರ್ಮಾಣಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಸರ್ಕಾರದಿಂದ ರೂ. ೯.೮೦ ಲಕ್ಷ ಮಂಜೂರಾಗಿದ್ದು ಶಾಸಕರಾದ ಮಂತರ್ ಗೌಡ ಅವರು ಭೂಮಿ ಪೂಜೆಯನ್ನು ನೆರವೇರಿಸಿದ್ದು, ಈಗಾಗಲೇ ಕೆಲಸವು ಪಾರಂಭಗೊAಡಿದೆ. ಉಳಿದ ಹಣ ರೂ.೪೫ ಲಕ್ಷಗಳನ್ನು ಸರ್ಕಾರದ ಅನುದಾನ ಹಾಗೂ ದಾನಿಗಳಿಂದ ಸಂಗ್ರಹಿಸುವ ಗುರಿಯನ್ನು ಹೊಂದಿದ್ದು ದಾನಿಗಳು ಸಹಕಾರ ನೀಡುವಂತೆ ಪ್ರಕಟಣೆ ಕೋರಿದೆ.