ಸುಂಟಿಕೊಪ್ಪ, ಮಾ. ೨೭: ಇಲ್ಲಿಗೆ ಸಮೀಪದ ೭ನೇ ಹೊಸಕೋಟೆಯ ಅಂಗನವಾಡಿ ಕೇಂದ್ರದಲ್ಲಿ ಅತ್ತೂರು, ನಲ್ಲೂರು, ಚಿಕ್ಲಿಹೊಳೆ, ಕಂಬಿಬಾಣೆ, ಭೂತನಕಾಡು, ಊರುಗುಪ್ಪೆ ಪೈಸಾರಿ, ಕಡ್ಲೆಮನೆ ಅಂಗನವಾಡಿ ಕಾರ್ಯಕರ್ತೆಯರು ಜಂಟಿಯಾಗಿ ಗರ್ಭಿಣಿ ಮಹಿಳೆಯರ ಆರೈಕೆ ಮಕ್ಕಳ ಪೌಷ್ಟಿಕದ ಬಗ್ಗೆ ಪೋಷಣ್ ಅಭಿಯಾನ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ೭ನೇ ಹೊಸಕೋಟೆಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ ರುಕ್ಮಯ್ಯ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗರ್ಭಿಣಿಯರು ಮತ್ತು ಮಕ್ಕಳ ತಾಯಂದಿರ ಆರೋಗ್ಯದ ಬಗ್ಗೆ ವಿವರ ನೀಡಿದರು.
ಇದೇ ಸಂದರ್ಭ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ, ಅನ್ನಪಾ
್ರಶನ ಹಾಗೂ ಬಾಣಂತಿಯರಾದ ಪ್ರಿಯ ಪ್ರಸಾದ್, ಸಬೀನ ರಿಯಾಜ್, ಸರಸ್ವತಿ ಇವರುಗಳಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪೋಷಣ್ ಅಭಿಯಾನದ ಸಂಯೋಜಕರಾದ ನಿತಿನ್ ಹಾಗೂ ಕಾವ್ಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಸ್ವಾಗತಿಸಿ, ವಂದಿಸಿದರು.