ಸೋಮವಾರಪೇಟೆ, ಮಾ. ೨೭: ಹಿಂದೂ ಗೆಳೆಯರ ಬಳಗ ಗೌಡಳ್ಳಿ-ದೊಡ್ಡಮಳ್ತೆ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ನಡೆದ ೭ನೇ ವರ್ಷದ ಮುಕ್ತ ಫುಟ್ಬಾಲ್ ಪಂದ್ಯಾವಳಿಗೆ ಪಂದ್ಯಾವಳಿಯ ಪ್ರಾಯೋಜಕರು ಮತ್ತು ದಾನಿಗಳಾದ ಚಾಮೇರ ಪವನ್ ದೇವಯ್ಯ ಚಾಲನೆ ನೀಡಿದರು.

ಪ್ರಥಮ ಬಹುಮಾನ ೧.೫೦ ಲಕ್ಷ ರೂ.ಗಳನ್ನು ಶಾಸಕ ಡಾ. ಮಂತರ್ ಗೌಡ, ದ್ವಿತೀಯ ಬಹುಮಾನ ನಗದು ೧ ಲಕ್ಷ ರೂ.ಗಳನ್ನು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಟ್ರೋಫಿಗಳನ್ನು ದಾನಿಗಳಾದ ಹಿತ್ತಲಗೇರಿ ವಸಂತ್, ಯಶ್ವಂತ್, ಸುಮಂತ್, ಹಿರಿಕರ ಶಶಿಕಲಾ, ರಕ್ಷಿತ್, ಶರಣ್ ಪ್ರಾಯೋಜಿಸಿದ್ದು, ಪ್ರಮುಖರು ಟ್ರೋಫಿ ಅನಾವರಣ ಮಾಡಿದರು.

ಈ ಸಂದರ್ಭ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್‌ಕುಮಾರ್, ಬಳಗದ ಅಧ್ಯಕ್ಷ ಕೆ.ಪಿ.ಆದರ್ಶ್, ಉಪಾಧ್ಯಕ್ಷ ಆಕಾಶ್ ಮುನ್ನಾ, ಕಾರ್ಯದರ್ಶಿ ಪ್ರಜ್ವಲ್ ನಂದಿಗುAದ, ಖಚಾಂಚಿ ನವೀನ್ ಅಜ್ಜಳ್ಳಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಗೌಡಳ್ಳಿ ಎಫ್.ಸಿ. ತಂಡಕ್ಕೆ ಪ್ರಶಸ್ತಿ

ರೋಚಕ ಫೈನಲ್‌ನಲ್ಲಿ ಗೌಡಳ್ಳಿ ಎಫ್.ಸಿ. ತಂಡ ಜಯಗಳಿಸಿತು. ಟೀಮ್ ಕೂಗೂರು ತಂಡ ಸಡನ್‌ಡೆತ್‌ನಲ್ಲಿ ಸೋಲು ಕಂಡು ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಮೊದಲ ಸೆಮಿಫೈನಲ್‌ನಲ್ಲಿ ಕೋಟೆಯೂರು ಬಸವೇಶ್ವರ ಎಫ್‌ಸಿ ತಂಡವನ್ನು ಟೀಮ್ ಕೂಗೂರು ತಂಡ ಫೆನಾಲ್ಟಿ ಸ್ಟೊçÃಕ್‌ನಲ್ಲಿ ೪-೨ ಗೋಲುಗಳ ಅಂತರ ದಲ್ಲಿ ಸೋಲುಣಿಸಿ ಫೈನಲ್ ಹಂತಕ್ಕೆ ತಲುಪಿತ್ತು. ೨ನೇ ಸೇಮೀಸ್‌ನಲ್ಲಿ ಗೌಡಳ್ಳಿ ಎಫ್‌ಸಿ ತಂಡ ಗೋಲ್ಡನ್ ಗೈಸ್ ತಂಡವನ್ನು ಫೆನಾಲ್ಟಿ ಸ್ಟೊçÃಕ್ ನಲ್ಲಿ ೪-೩ ಗೋಲುಗಳ ಅಂತರದಲ್ಲಿ ಸೋಲಿಸಿ ಫೈನಲ್‌ಗೇರಿತ್ತು.

ಪ್ರಥಮ ಬಹುಮಾನ ೧,೫೦,೦೦೦ ರೂ.ಗಳ ನಗದು, ದ್ವಿತೀಯ ಬಹುಮಾನ ನಗದು ೧,೦೦,೦೦೦ ರೂ, ನಗದು ಮತ್ತು ಟ್ರೋಫಿಗಳನ್ನು ವಿಜೇತ ತಂಡಗಳು ಪಡೆದುಕೊಂಡವು. ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಅದು ಶಾರೀರಿಕ ಆರೋಗ್ಯ, ಮಾನಸಿಕ ಸ್ಥೆöÊರ್ಯವನ್ನು ಹೆಚ್ಚಿಸುತ್ತದೆ. ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಸೌಲಭ್ಯಗಳು ಮತ್ತು ಅವಕಾಶಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಗೌಡಳ್ಳಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೯ ಎಕರೆ ಜಾಗವಿದ್ದು, ಕ್ರೀಡಾ ವಸತಿ ಶಾಲೆ ನಿರ್ಮಾಣಕ್ಕೆ ಸ್ಥಳೀಯ ಕ್ರೀಡಾಭಿಮಾನಿಗಳ ಬೇಡಿಕೆಯಿದ್ದು, ಕ್ರೀಡಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್, ಗೆಳೆಯರ ಬಳಗದ ಅಧ್ಯಕ್ಷ ಕೆ.ಪಿ. ಆದರ್ಶ್, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮತ್ತಿತರ ಗಣ್ಯರು ಇದ್ದರು. ಪ್ರಾಥಮಿಕ ಹಾಗೂ ಫ್ರೌಢಶಾಲೆಯ ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಗೌಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್, ರಾಷ್ಟç ಮಟ್ಟದ ಜಾವಲಿನ್ ಥ್ರೊ ಕ್ರೀಡಾಪಟು ಡಿ.ಆರ್. ಅನಿಶ್ ಅವರನ್ನು ಸನ್ಮಾನಿಸಲಾಯಿತು.