ಮುಳ್ಳೂರು, ಮಾ. ೨೭: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ೨ನೇ ಅವಧಿಗೆ ಅಧ್ಯಕ್ಷರಾಗಿ ಡಿ.ಎನ್. ಮಲ್ಲೇಶ್ ಆಯ್ಕೆಯಾದರು.
೧೨ ಮಂದಿ ನಿರ್ದೇಶಕರನ್ನು ಒಳಗೊಂಡಿರುವ ಆಡಳಿತ ಮಂಡಳಿಯಲ್ಲಿ ೨ನೇ ಅವಧಿಗೆ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಮಲ್ಲೇಶ್ ಅವರಿಗೆ ೭ ಮತಗಳು ಲಭಿಸಿದರೆ ಇವರ ವಿರುದ್ಧ ಸ್ಪರ್ಧಿಸಿದ್ದ ನಿರ್ದೇಶಕ ಎಸ್.ಎಂ. ಉಮಾಶಂಕರ್ ಅವರಿಗೆ ೫ ಮತ ಲಭಿಸಿತು.
ಮಡಿಕೇರಿ ಸಹಕಾರ ಇಲಾಖೆಯ ಅಧೀಕ್ಷಕಿ ಪಿ. ಆಶಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಆಡಳಿತ ಮಂಡಳಿ ಉಪಾಧ್ಯಕ್ಷೆ ಪೂಜಾ ವಿಜಯ್, ಆಡಳಿತ ಮಂಡಳಿಯ ನಿರ್ದೇಶಕರು, ಸಂಘದ ಸಿಇಓ ಹೂವಣ್ಣ, ಸಿಬ್ಬಂದಿ ಎಚ್.ಆರ್. ಧರಣಿ, ಕೃಪಾ, ಪ್ರದೀಪ್ ಮುಂತಾದವರು ಇದ್ದರು.