ಸೋಮವಾರಪೇಟೆ, ಮಾ. ೨೭: ಯಡೂರು ಉದಯ ಯುವಕ ಸಂಘದ ವತಿಯಿಂದ ಇತ್ತೀಚೆಗೆ ಗ್ರಾಮದ ಮೈದಾನದಲ್ಲಿ ಯುಗಾದಿ ಹಾಗೂ ರಾಮನವಮಿ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ಮಹಿಳೆಯರ ಥ್ರೋಬಾಲ್ ಪ್ರಶಸ್ತಿಯನ್ನು ಸಕಲೇಶಪುರ ರಂಜಿತಾ ಫ್ರೆಂಡ್ಸ್ ತಂಡ ಮುಡಿಗೇರಿಸಿಕೊಂಡಿತು.

ಸೋಮವಾರಪೇಟೆ ಭಾಗ್ಯ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕಬಡ್ಡಿ ಪ್ರಶಸ್ತಿಯನ್ನು ಸೋಮವಾರಪೇಟೆ ಟೀಮ್ ವಾಂಟೆಡ್ ಪ್ರಥಮ ಹಾಗೂ ಯಡೂರು ಎ ತಂಡ ದ್ವಿತೀಯ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಉದಯ ಯುವಕ ಸಂಘದ ಅಧ್ಯಕ್ಷ ಡಿ.ಪಿ. ಲೋಹಿತ್, ಚೌಡ್ಲು ಪ್ಯಾಕ್ಸ್ನ ಸದಸ್ಯರಾದ ಡಿ.ಎಸ್. ರಘು, ಕೆ.ಪಿ. ಭಾನುಪ್ರಕಾಶ್, ತೀರ್ಪುಗಾರರ ಸಂಘದ ಜಿಲ್ಲಾಧ್ಯಕ್ಷ ಎ.ಎಂ. ಆನಂದ್ ಬಹುಮಾನ ವಿತರಿಸಿದರು.

ಗ್ರಾಮೀಣ ಭಾಗದ ಮಹಿಳೆಯರು ಪಂದ್ಯಾಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಬಡ್ಡಿಯಲ್ಲಿ ಗ್ರಾಮೀಣ ಪ್ರತಿಭೆಗಳು ಮಿಂಚಿದರು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ಅಧ್ಯಕ್ಷ ಲೋಹಿತ್ ಅಭಿಪ್ರಾಯಿಸಿದರು. ಯುವಕ ಸಂಘದಲ್ಲಿ ದುಡಿದ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.