ಕೂಡಿಗೆ, ಮಾ. ೨೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ವೀರಭದ್ರ ಫ್ರೆಂಡ್ಸ್ನ ವತಿಯಿಂದ ಟಿ. ೧೦ ಮಾದರಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹುದುಗೂರು ಕೆ.ವೈ.ಸಿ. ತಂಡವು ಪ್ರಥಮ ಸ್ಥಾನವನ್ನು ಗಳಿಸಿ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.

ದ್ವಿತೀಯ ಬಹುಮಾನವನ್ನು ಸುಂದರನಗರದ ವಿ.ಎಂ. ಬ್ರದರ್ಸ್ ತಂಡ ಪಡೆದುಕೊಂಡಿತು. ಸರಣಿಯಲ್ಲಿ ಉತ್ತಮ ಬ್ಯಾಟ್ಸ್ಮನ್ ಆಗಿ ದೀಕ್ಷಿತ್, ಉತ್ತಮ ಬೌಲರ್ ಆಗಿ ಭುವನೇಶ್, ಉತ್ತಮ ಫೀಲ್ಡರ್ ಅಗಿ ಹರೀಶ್, ಸರಣಿ ಪುರುಷೋತ್ತಮ ಸಚಿನ್ ಹೊರಹೊಮ್ಮಿದರು. ಪಂದ್ಯಾವಳಿಯ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಕೆ. ಭೋಗಪ್ಪ ನೆರವೇರಿಸಿದರು.

ಈ ಸಂದರ್ಭದಲ್ಲಿ ವೀರೇಂದ್ರ ಫ್ರೆಂಡ್ಸ್ ಸಮಿತಿ ಅಧ್ಯಕ್ಷ ಸಿ.ಸಿ. ಸ್ವಾಮಿ ಸೇರಿದಂತೆ ಸದಸ್ಯರು, ಗ್ರಾಮಸ್ಥರು ಗುತ್ತಿಗೆದಾರರು, ವಿವಿಧ ತಂಡಗಳ ಆಟಗಾರರು ಹಾಜರಿದ್ದರು.