ಮಡಿಕೇರಿ, ಮಾ. ೨೬: ಕೊಡಗಿನ ಏಕೈಕ ರಂಗ ಸಂಸ್ಥೆ “ ರಂಗಭೂಮಿ ಟ್ರಸ್ಟ್ ಕೊಡಗು” ಆಶ್ರಯದಲ್ಲಿ “ ನಿಜಮಹಾತ್ಮ ಬಾಬಾಸಾಹೇಬ'' ನಾಟಕ ತಾ. ೨೯ ರಂದು ಸಂಜೆ ೫.೩೦ ಕ್ಕೆ ವಿರಾಜಪೇಟೆ ಕೊಡವ ಸಮಾಜದ ತ್ರಿವೇಣಿ ವಿದ್ಯಾಲಯದ ಜಿಮ್ಮಿ ರಂಗಮAದಿರದಲ್ಲಿ ನಡೆಯಲ್ಲಿದ್ದು, ಇದು ೪೯ನೇ ಪ್ರದರ್ಶನವಾಗಿದೆ.

ತಾ. ೩೧ ರಂದು ಪೊನ್ನಂಪೇಟೆ ಕೊಡವ ಸಮಾಜದ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಸಂಜೆ ೫.೩೦ಕ್ಕೆ ನಾಟಕದ ೫೦ ನೇ ಪ್ರದರ್ಶನ ನಡೆಯಲಿದೆ. ಡಾ. ಅಂಬೇಡ್ಕರ್‌ರ ವಿಚಾರಧಾರೆಯ ಮುಚ್ಚಿಟ್ಟ ಅನೇಕ ಸತ್ಯಗಳ ಅನಾವರಣ ಈ ನಾಟಕವಾಗಿದ್ದು, ರಚನೆ, ನಿರ್ದೇಶನವನ್ನು ಅಡ್ಡಂಡ ಕಾರ್ಯಪ್ಪ ಅವರು ಮಾಡಿದ್ದಾರೆ.