ಮಡಿಕೇರಿ, ಮಾ. ೨೬: ಉಡುಪಿಯ ಸಾಲಿಗ್ರಾಮದ ಅಧ್ಯಾತ್ಮಿಕ ಜಾಗೃತಿ ಕೇಂದ್ರ ಡಿವೈನ್ ಪಾರ್ಕ್ನ ಅಂಗಸAಸ್ಥೆಗಳಾದ ಕೊಡಗು ಜಿಲ್ಲೆಯ ವಿವೇಕ ಜಾಗೃತ ಬಳಗಗಳ ವತಿಯಿಂದ ಇಲ್ಲಿನ ಕಾವೇರಿ ಹಾಲ್‌ನಲ್ಲಿ ದಿವ್ಯ ಗಾನಾಮೃತ ಕಾರ್ಯಕ್ರಮ ನಡೆಯಿತು. ಡಿವೈನ್ ಪಾರ್ಕ್ನ ಟ್ರಸ್ಟಿ ಹಾಗೂ ಕೋಟದ ಯೋಗಬನದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿವೇಕ ಉಡುಪ ಹಾಗೂ ಡಿವೈನ್ ಪಾರ್ಕ್ನ ಟ್ರಸ್ಟಿ ಸಿಸ್ಟರ್ ನಿವೇದಿತಾ ರಾಜ್ ಅಧ್ಯಾತ್ಮಿಕ ವಿಷಯಗಳ ಕುರಿತು ಮಾತನಾಡಿದರು.

ರಾಮಕೃಷ್ಣ ಪರಮಹಂಸ, ಮಾತೆ ಶಾರಾದಾದೇವಿ, ಸ್ವಾಮಿ ವಿವೇಕಾನಂದ ಅವರ ತತ್ವಗಳನ್ನು ಕುರಿತು ಉಪನ್ಯಾಸಗಳು ನಡೆದವು. ಕಾರ್ಯಕ್ರಮದಲ್ಲಿ ಸಾಮೂಹಿಕ ಭಜನೆಗಳು, ರಾಮರಕ್ಷಾ ಸ್ತ್ರೋತ್ರಪಠಣ ನಡೆಯಿತು.