ಮಡಿಕೇರಿ, ಮಾ. ೨೫: ಭಾಗಮಂಡಲದಲ್ಲಿ ನಡೆಯುತ್ತಿರುವ ೭೬ನೇ ವರ್ಷದ ಶ್ರೀರಾಮದೇವರ ಉತ್ಸವ ಮತ್ತು ಮೊದಲ ವರ್ಷದ ಪ್ರಭು ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಈ ಹಿಂದೆ ತಾನು ಶಾಸಕನಾಗುವುದಕ್ಕೂ ಮೊದಲು ಈ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಸಮಿತಿಯವರು ತನ್ನನ್ನು ಭೇಟಿಯಾಗಿದ್ದು ಆಗಲೇ ಶ್ರೀ ದೇವರ ಸೇವೆಗೆ ತನ್ನ ಕೈಲಾದ ಸಹಾಯವನ್ನು ಮಾಡಿದ್ದೆ. ಈಗ ಅತ್ಯಂತ ಸುಂದರವಾಗಿ ಶ್ರೀ ರಾಮಚಂದ್ರ ದೇವರ ದೇವಸ್ಥಾನ ಮೂಡಿಬಂದಿದೆ ಎಂದರು.

ಈ ಸಂದರ್ಭ ವೆಂಕಟೇಶ್ ಕೋಳಿಬೈಲು, ಸುನಿಲ್ ಪತ್ರಾವೊ, ಗೌರೀಶ್ ರೈ, ಕುದುಪಜೆ ಪ್ರಕಾಶ್, ಹರ್ಷ ದೇವಂಗೋಡಿ, ನೆರವಂಡ ಉಮೇಶ್, ಬಾಲಚಂದ್ರ ನಾಯರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.