ಭಾಗಮಂಡಲ, ಮಾ. ೨೫: ಇಲ್ಲಿನ ಮೇಲ್ಸೆತುವೆ ಬಳಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಆಟೋರಿಕ್ಷಾ ನಿಲ್ದಾಣವನ್ನು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಸಹ ಜನಸೇವೆಯಲ್ಲಿ ಇರುವಂತವರು. ಸುಸಜ್ಜಿತ ಆಟೋ ನಿಲ್ದಾಣದೊಂದಿಗೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಗುರಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ವೆಂಕಟೇಶ್ ಕೋಳಿಬೈಲು, ಸುನಿಲ್ ಪತ್ರವೊ, ಗೌರೀಶ್ ರೈ, ಕುದುಪಜೆ ಪ್ರಕಾಶ್, ಹರ್ಷ ದೇವಂಗೋಡಿ, ನೆರವಂಡ ಉಮೇಶ್, ಬಾಲಚಂದ್ರ ನಾಯರ್, ಸೂರಜ್ ಹೊಸೂರು ಮತ್ತಿತರರು ಉಪಸ್ಥಿತರಿದ್ದರು.