ಮಡಿಕೇರಿ, ಮಾ.೨೫: ಮಡಿಕೇರಿ ನಗರದ ಸನಿಹದಲ್ಲೇ ಬರುವ ಇಬ್ನಿವಳವಾಡಿ ಗ್ರಾಮದ ತೋಟವೊಂದರಲ್ಲಿ ವ್ಯಾಘ್ರ ಸಂಚರಿಸಿರುವುದು ಸಿ.ಸಿ ಕ್ಯಾಮರಾ ಮೂಲಕ ಪತ್ತೆಯಾಗಿದೆ.

ಅಲ್ಲಿನ ನಿವಾಸಿ ಪೊನ್ನಚೆಟ್ಟಿರ ಸಂದೀಪ್ ಅವರ ಕಾಫಿ ತೋಟದಲ್ಲಿ ಹುಲಿ ತಿರುಗಾಡಿರುವುದು ಬೆಳಕಿಗೆ ಬಂದಿದೆ. ಸಂದೀಪ್ ಅವರು ಬೆಂಗಳೂರಿನಲ್ಲಿದ್ದು, ತೋಟ ವ್ಯಾಪ್ತಿಯಲ್ಲಿ ಕ್ಯಾಮರಾ ಅಳವಡಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ೭ ಗಂಟೆಗೆ ಹುಲಿ ತೋಟದೊಳಗಿನ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದುದ್ದನ್ನು ಗಮನಿಸಿದ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹುಲಿಯ ಹೆಜ್ಜೆ ಪತ್ತೆಯಾಗಿದ್ದು, ನಂತರದಲ್ಲಿ ಅದು ಸ್ಥಳದಿಂದ ಪೂರ್ವ ದಿಕ್ಕಿನ ಅರಣ್ಯ ಸೇರಿರುವುದಾಗಿ ಇಲಾಖೆ ಮಾಹಿತಿ ನೀಡಿದೆ. ಸ್ಥಳದಲ್ಲಿ ಬೆಳಿಗ್ಗೆಯಿಂದಲೂ ಹುಲಿಯ ಪತ್ತೆಗೆ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸಿದರೂ ಚಲನವಲನ ಕಂಡುಬAದಿಲ್ಲ. ಸ್ಥಳದ ವ್ಯಾಪ್ತಿಯಲ್ಲಿ ೮ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಂಜೆಯ ವೇಳೆಗೆ ಬೋನ್ ಅನ್ನು ತಂದಿರಿಸಲಾಗಿದೆ. ಅಲ್ಲದೆ ಹಿರಿಯ ಅಧಿಕಾರಿಗಳು ಸೇರಿ ಸಿಬ್ಬಂದಿಗಳು ಕೂಂಬಿAಗ್ ನಡೆಸಿದ್ದು, ಸಂಜೆ ಕುಶಾಲನಗರದಿಂದ ೪ ಸಾಕಾನೆಗಳನ್ನು ತರಿಸಿ ಅವುಗಳ ಸಹಾಯದಿಂದಲೂ ಕಾರ್ಯಾಚರಣೆ ನಡೆಸಲಾಗಿದೆ. ಸಿ.ಸಿ.ಎಫ್ ಸೋನಲ್, ಡಿ.ಸಿ.ಎಫ್ ಅಭಿಷೇಕ್, ಎ.ಸಿ.ಎಫ್ ಸೆಂದಿಲ್ ಕುಮಾರ್, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಡಿ.ಆರ್.ಎಫ್.ಒ ಸುನಿಲ್ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು.

ಜನರಲ್ಲಿ ಆತಂಕ

ಹುಲಿ ಪತ್ತೆಯಾದ ಸ್ಥಳದ ಸನಿಹದಲ್ಲೇ ಇರುವ ವಳವಾಡಿ ಭದ್ರಕಾಳಿ ದೇವಸ್ಥಾನದ ಉತ್ಸವ ಆರಂಭಗೊAಡಿದ್ದು, ಜನರು ಆತಂಕ ಎದುರಿಸುತ್ತಿದ್ದಾರೆ. ಕಳೆದ ರಾತ್ರಿ ಬೋಡ್ ಜರುಗಿದ್ದು ಇಂದು ಬೆಳಗ್ಗಿನ ಜಾವ ಜನಪದ ಅಭ್ಯಾಸದಲ್ಲೂ ಜನರು ತೊಡಗಿಸಿಕೊಂಡಿದ್ದರು. ಪರಿಸ್ಥಿತಿ ಹೀಗಿದ್ದರೂ ಸನಿಹದಲ್ಲೇ ವ್ಯಾಘ್ರನ ಸಂಚಾರ ಕಂಡು ಬಂದಿರುವುದು ಆತಂಕ ಸೃಷ್ಟಿಸಿದೆಯಲ್ಲದೆ ಇಲಾಖೆಗೂ ಬಿಸಿ ಮುಟ್ಟಿದಂತಾಗಿದೆ.

ಕುಶಾಲನಗರ ಹಾಗೂ ಮಡಿಕೇರಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಹುಲಿಯ ಪತ್ತೆಗಾಗಿ ಬಲೆ ಬೀಸಿರುವುದಾಗಿ ಡಿ.ಸಿ.ಎಫ್ ಅಭಿಷೇಕ್ ಅವರು ಮಾಹಿತಿ ನೀಡಿದ್ದಾರೆ. ಈ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳುಗಳಿAದ ಜಾನುವಾರ ಸಾವು ಪ್ರಕರಣಗಳು ವರದಿಯಾಗಿದ್ದು, ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಸಿದ ಸಂದರ್ಭ ಯಾವುದೇ ವನ್ಯಜೀವಿಯ ಕುರುಹು ಪತ್ತೆಯಾಗಿರಲಿಲ್ಲ. ಸಣ್ಣ ವನ್ಯಪ್ರಾಣಿಯ ಹೆಜ್ಜೆ ಒಂದಷ್ಟೆ ಒಂದೆಡೆ ಪತ್ತೆಯಾಗಿದ್ದು, ಚಿರತೆಯದ್ದು ಎಂದು ಅಂದಾಜಿಸಲಾಗಿತ್ತು. ಇದೀಗ ಈ ವ್ಯಾಪ್ತಿಯಲ್ಲಿ ಹುಲಿ ಚಲಿಸುತ್ತಿದ್ದು ತಿಳಿದು ಬಂದ ಹಿನ್ನೆಲೆ ಇದರ ಪತ್ತೆ ಕಾರ್ಯ ನಡೆಯುತ್ತಿದೆ. ಹುಲಿಯು ಅಂದಾಜು ೨, ೩ ವರ್ಷ ಪ್ರಾಯದ್ದಾಗಿದ್ದು, ಸೆರೆಗೆ ಅನುಮತಿ ದೊರಕಿದ್ದಾಗಿಯೂ ಅಭಿಷೇಕ್ ಅವರು ಮಾಹಿತಿ ನೀಡಿದ್ದಾರೆ.