ಪೊನ್ನಂಪೇಟೆ, ಮಾ. ೨೫: ಕೊಡವ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ವಿಶೇಷ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ತಾ. ೨೭ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿರುವ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡವ ಸಾಹಿತ್ಯ ಮಾಲೆ ಯೋಜನೆಯ ೧೯೭ ಮತ್ತು ೧೯೮ನೇ ನೂತನ ಪುಸ್ತಕ ಬಿಡುಗಡೆ ಸಮಾರಂಭ ಪ್ರಯುಕ್ತ ಕೊಡವ ಹಾಡು, ಕೊಡವ ಭಾಷೆ ಓದುವುದು ಹಾಗೂ ತಮಾಷೆ ಪೈಪೋಟಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ತಾ. ೨೭ ರಂದು ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೨ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಪ್ರಮುಖರಾದ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಅಂಜಪರವAಡ ಸನ್ನಿ ತಮ್ಮಯ್ಯ, ಮಲ್ಲಮಾಡ ಶ್ಯಾಮಲಾ ಸುನಿಲ್, ಪೊನ್ನೋಲತಂಡ ಕೆ. ಸೋಮಣ್ಣ, ಉಳುವಂಗಡ ಕಾವೇರಿ ಉದಯ ಹಾಗೂ ನೂರೆರ ಸರಿತಾ ಉತ್ತಯ್ಯ ಭಾಗವಹಿಸಲಿದ್ದಾರೆ.