ಸಿದ್ದಾಪುರ ಮಾ.೨೫: ಸಿದ್ದಾಪುರದ ಹಲವಾರು ಹೋಟೆಲ್ಗಳು ಅಡುಗೆ ಅನಿಲದ ಕೊರತೆಯಿಂದ ಬಂದ್ ಮಾಡಲಾಗಿದೆ. ಸಿದ್ದಾಪುರದ ಬಸ್ ನಿಲ್ದಾಣದಲ್ಲಿರುವ ಮೂರು
ಹೋಟೆಲ್ಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಇರುವ ಕೆಲವು ಹೋಟೆಲ್ಗಳು ಮುಚ್ಚಲ್ಪಟ್ಟಿವೆ. ಇದಲ್ಲದೆ ಸಿದ್ದಾಪುರ ವ್ಯಾಪ್ತಿಯ ಬೇಕರಿಯಲ್ಲಿ ಕೂಡ ತಿಂಡಿ ಮಾಡಲು ಗ್ಯಾಸ್ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಕೋಳಿ ಮಾಂಸದ ಅಂಗಡಿಯಲ್ಲಿ ಕೋಳಿಗಳನ್ನು ಸ್ವಚ್ಛಗೊಳಿಸಲು ಬಿಸಿನೀರು ತಯಾರಿಸಲು ಕೂಡ ಸಮಸ್ಯೆ ಎದುರಾಗಿದೆ ಎಂದು ಕೋಳಿ ಅಂಗಡಿ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಿದ್ದಾಪುರದಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿರುವ ಹೊರರಾಜ್ಯದ ನಿವಾಸಿ ಬೀರ್ ಸಿಂಗ್ ಪಾನಿಪುರಿ ತಯಾರಿಸಲು ಹಾಗೂ ಗೋಬಿ ಮಂಚೂರಿ ತಯಾರು ಮಾಡಲು ಗ್ಯಾಸ್ನ ಕೊರತೆಯಿಂದಾಗಿ ಅಂಗಡಿಯನ್ನು ಮುಚ್ಚಲಾಗುವುದೆಂದು ತಿಳಿಸಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಹೋಟೆಲ್ ವ್ಯಾಪಾರ ಮಾಡುತ್ತಿರುವ ಪ್ಯಾರಡೈಸ್ ಹೋಟೆಲ್ ಮಾಲೀಕರಾದ ವಿ.ಕೆ. ಜಾಫರ್ ಅಲಿ, ‘ಶಕ್ತಿ’ಯೊಂದಿಗೆ ಮಾತನಾಡಿ, ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಮರ್ಪಕವಾಗಿ ಸಿಗದೇ ಸಮಸ್ಯೆ ಎದುರಾಗಿದೆ, ಹೋಟೆಲ್ ಮುಚ್ಚಲಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಚೀಲಗಳ ಬೆಲೆ ಗಗನಕ್ಕೆ!
ಯುದ್ಧದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಚೀಲಗಳ ಬೆಲೆ ಗ ಸುಂಟಿಕೊಪ್ಪ, ಮಾ.೨೫: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅಡುಗೆ ಅನಿಲಕ್ಕೆ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಪ್ರಸಂಗ ಪ್ರತನಿತು ಗೋಚರಿಸುತ್ತಿದೆ. ಬೇಕರಿ, ಪಾನಿಪುರಿ ಅಂಗಡಿಗಲೂ ಸೇರಿದಂತೆ ಕೆಲ ಹೊಟೇಲುಗಳು ಸಹ ಮುಚ್ಚಿದ್ದು, ಕೋಳಿ ಸ್ವಚ್ಛಗೊಳಸಿಸಲು ಬಿಸಿ ನೀರು ಕೂಡ ಅಡುಗೆ ಅನಿಲದ ಕೊರತೆಯಿಂದ ಇಲ್ಲವಾಗಿದೆ. ಗನಕ್ಕೆ ಏರಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಮತ್ತಷ್ಟು ವಸ್ತುಗಳ ಬೆಲೆಗಳು ಗಗನಕ್ಕೆ ಏರುವ ಸಾಧ್ಯತೆಯಿದ್ದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆÀದಂತ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕಂಡುಬAದಿದೆ.