ಸಿದ್ದಾಪುರ, ಮಾ ೨೪: ಅಡುಗೆ ಅನಿಲದ ಕೊರತೆ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ಸಿದ್ಧಾಪುರದಲ್ಲಿ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ ಸಿ.ಪಿ.ಐ.ಎಂ ಪಕ್ಷದ ಪ್ರಮುಖರಾದ ರಮೇಶ್ ಮತ್ತು ಭರತ್ ಮಾತನಾಡಿ, ಜನಸಾಮಾನ್ಯರು ಬಳಸುತ್ತಿರುವ ಅಡುಗೆ ಅನಿಲ ಸಮಸ್ಯೆಯಿಂದಾಗಿ ಹಾಗೂ ಬೆಲೆ ಏರಿಕೆಯಿಂದಾಗಿ ಬಡಜನತೆಗೆ ಜೀವನ ಮಾಡಲು ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.
ಅಡುಗೆ ಅನಿಲ ಕೊರತೆಯಿಂದಾಗಿ ಗ್ರಾಮಾಂತರ ಹಾಗೂ ಪಟ್ಟಣ ವ್ಯಾಪ್ತಿಯ ಹೊಟೇಲ್ಗಳು ಮುಚ್ಚಿದ್ದು ಕಾರ್ಮಿಕರ ಜೀವನ ದುಸ್ತರವಾಗಿದೆ ಎಂದು ತಿಳಿಸಿದರು. ಪಕ್ಷದ ಪದಾಧಿಕಾರಿಗಳಾದ ವೈಜು, ಅಬ್ದುಲ್ ರಹಿಮಾನ್, ಮುಸ್ತಫ ಇನ್ನಿತರರು ಹಾಜರಿದ್ದರು.