ಗೋಣಿಕೊಪ್ಪಲು, ಮಾ. ೨೪: ಕೊಡಗಿನ ಗಡಿ ಭಾಗವಾದ ಕುಟ್ಟ ಗ್ರಾಮದ ಗರುಡಗಿರಿಯ ಶ್ರೀ ಕೃಷ್ಣನ ದೇವಾಲಯದಲ್ಲಿ ಎರಡನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆಯಿAದ ಸಂಜೆಯವರೆಗೂ ಭಕ್ತರು ಆಗಮಿಸಿ ಪೂಜಾಕೈಂಕರ್ಯಗಳಲ್ಲಿ ಭಾಗಿಗಳಾದರು.

ಸುಂದರ ಪರಿಸರದ ನಡುವೆ ಅತಿ ಎತ್ತರದ ಗರುಡಗಿರಿಯಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಾಣವಾಗಿದ್ದು, ಇದರ ೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮುಂಜಾನೆ ೬ ಗಂಟೆಯಿAದ ರಾತ್ರಿ ೭.೩೦ ಗಂಟೆವರೆಗೆ ನಾನಾ ರೀತಿಯ ಪೂಜಾ ಕಾರ್ಯಗಳು ನೆರವೇರಿದವು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿಶೇಷ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ದೇವತಾ ಪ್ರಾರ್ಥನೆ, ಉಷಾ ಪೂಜೆ, ಅಭಿಷೇಕ, ವಿಷ್ಣು ಸಹಸ್ರನಾಮ ಹೋಮ, ಗೋಪಾಲಕೃಷ್ಣ ದೇವರಿಗೆ ಸರ್ವಾಲಂಕಾರ ಮಹಾಪೂಜೆ ಹಾಗೂ ಗಣಪತಿ ಸಾನಿಧ್ಯದಲ್ಲಿ ದ್ವಾದಶ ನಾರಿಕೇಳ ಗಣಯಾಗ, ನಾಗದೇವರ ಸಾನಿಧ್ಯದಲ್ಲಿ ಪಂಚಾಮೃತ ಅಭಿಷೇಕ, ಕಳಶಾಭೀಷಕ, ಮಹಾಪೂಜೆ, ಕರಂಗಾಳಿ ನಡೆಯಿತು.

ಅಲಂಕಾರ ಪೂಜೆ, ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ, ರಂಗಪೂಜೆ, ಆರ್ಟ್ ಆಫ್ ಲೀವಿಂಗ್ ಸದಸ್ಯರಿಂದ ಸತ್ಸಂಗ ನಡೆಯಿತು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯಲ್ಲಿ ಅಧ್ಯಕ್ಷ ತೀತಿರ ನರೇನ್ ಬಾಲಕೃಷ್ಣ, ಉಪಾಧ್ಯಕ್ಷ ಮಚ್ಚಮಾಡ ಬಿ.ಸುಬ್ಬಯ್ಯ, ಕಾರ್ಯದರ್ಶಿ ಚೋಡುಮಾಡ ಶರೀನ್ ಸುಬ್ಬಯ್ಯ, ಖಜಾಂಜಿ, ತೀತಿರ ಎ. ಕಾರ್ಯಪ್ಪ, ಕಾನೂನು ಸಲಹೆಗಾರ ಗಿರೀಶ್ ಅಣ್ಣಯ್ಯ, ನಿರ್ದೇಶಕರುಗಳಾದ ಅಜ್ಜಿಕುಟ್ಟಿರ ಎಸ್.ಬೋಪಣ್ಣ, ಮಚ್ಚಮಾಡ ಕಾಶಿ ಕಾರ್ಯಪ್ಪ, ತೀತಿರÀ ಕೆ.ಕುಶಾಲಪ್ಪ, ತೀತಿರ ತೀರ್ಥ ಮಂಜುನಾಥ್, ಮುಕ್ಕಾಟಿರ ಎಸ್.ಅಯ್ಯಪ್ಪ, ಕಟ್ಟೆರ ರಮೇಶ್ ದೇವಯ್ಯ, ಧ್ಯಾನ್ ದರ್ಶನ್, ಪ್ರಶಾಂತ್, ಚಂದ್ರ ಕುಟ್ಟನ್, ಜಾನ್ಸನ್, ಹಾಗೂ ಡಿ.ಟಿ. ರವಿ, ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪೂಜಾ ಕೈಂಕರ್ಯವನ್ನು ಅರ್ಚಕ ಕೆ.ಆರ್.ಮೋಹನ್ ನೆರವೇರಿಸಿದರು. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.