ಕೂಡಿಗೆ, ಮಾ. ೨೨: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯ ಮೇಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ತಾ. ೨೭ ರಂದು ನಡೆಯುವ ಬ್ರಹ್ಮ ರಥೋತ್ಸವ ಅಂಗವಾಗಿ ಬ್ರಹ್ಮ ರಥದ ಸಿದ್ಧತೆ ಭರದಿಂದ ನಡೆಯುತ್ತಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ ಕೆ.ಕೆ.ಮಂಜುನಾಥ ಸ್ವಾಮಿ, ಗೌರವ ಅಧ್ಯಕ್ಷ ಇ.ಎಸ್. ಗಣೇಶ್, ವಿಶೇಷ ಆಹ್ವಾನಿತರಾದ ಕೆ.ಸಿ. ನಂಜುAಡಸ್ವಾಮಿ, ಕಾರ್ಯದರ್ಶಿ ಕೆ.ಎನ್. ಮಾಧವ, ಸಹ ಕಾರ್ಯದರ್ಶಿ ಕೆ.ಎಲ್. ಮಹೇಶ್ ಕುಮಾರ್, ನಿರ್ದೇಶಕರುಗಳಾದ ಕೆ.ಆರ್. ಲೋಕೇಶ್, ಆರ್.ಆರ್. ಮಧು, ಶಿರಗಜೆ ನವೀನ್, ರಮೇಶ್, ಪ್ರಶಾಂತ್, ಹಕ್ಕೆ ಮೋಹನ್ ಸೇರಿದಂತೆ ಇನ್ನಿತರರು ಉಸ್ತುವಾರಿ ವಹಿಸಿಕೊಂಡಿದ್ದಾರೆ.