ಗೋಣಿಕೊಪ್ಪಲು, ಮಾ. ೨೨: ರೂ. ೧೫ ಲಕ್ಷ ವೆಚ್ಚದಲ್ಲಿ ಡಾಂಬರೀಕರಣಗೊAಡ ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಲಯ್ಯಪ್ಪ ದೇವಾಲಯಕ್ಕೆ ತೆರಳುವ ರಸ್ತೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಸಕಾಲದಲ್ಲಿ ರಸ್ತೆಯ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಎ.ಎಸ್. ಪೊನ್ನಣ್ಣ ಅವರನ್ನು ಕಾಡ್ಯಮಾಡ ಕುಟುಂಬಸ್ಥರ ಐನ್‌ಮನೆಯಲ್ಲಿ ಗ್ರಾಮಸ್ಥರ ಹಾಗೂ ಕಾಡ್ಯಮಾಡ ಕುಟುಂಬಸ್ಥರ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಗ್ರಾಮೀಣ ರಸ್ತೆಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಒದಗಿಸಲಾಗುತ್ತಿದೆ. ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸಲಾಗುವುದು ಎಂದರು. ಈ ವೇಳೆ ಕಾಡ್ಯಮಾಡ ಮೊಣ್ಣಪ್ಪ, ಕಾಡ್ಯಮಾಡ ಪೆಮ್ಮಯ್ಯ, ಕಾಡ್ಯಮಾಡ ಡಾ. ಬೋಪಣ್ಣ, ಕಾಡ್ಯಮಾಡ ಪೂವಯ್ಯ, ಕಾಡ್ಯಮಾಡ ಉದಯ್ ಉತ್ತಪ್ಪ, ಕಾಡ್ಯಮಾಡ ಮೋತಿ ಅಪ್ಪಚ್ಚು, ಕಾಡ್ಯಮಾಡ ಅಶೋಕ್ ದೇವಯ್ಯ, ಕಾಡ್ಯಮಾಡ ಚೇತನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗುತ್ತಿಗೆದಾರ ಕಡೆಮಾಡ ಮುತ್ತಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜೆ.ಕೆ.ಸೋಮಣ್ಣ, ಪಕ್ಷದ ಪ್ರಮುಖರುಗಳಾದ ಎ.ಜೆ. ಬಾಬು, ವಿ.ಟಿ.ವಾಸು, ಪ್ರಮೋದ್ ಗಣಪತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ರೂ. ೩.೫ ಲಕ್ಷ ಅನುದಾನದಲ್ಲಿ ಕಾಡ್ಯಮಾಡ ಐನ್‌ಮನೆಯಿಂದ ಕಾಡ್ಲಯ್ಯಪ್ಪ ದೇವಸ್ಥಾನದ ದೇವಭಂಡಾರ ಹೋಗುವ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ನಂತರ ಕಾಡ್ಲಯ್ಯಪ್ಪ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.