ಮಡಿಕೇರಿ, ಮಾ. ೨೧: ಹೊದ್ದೂರು ಗ್ರಾಮದ ಶ್ರೀ ಮಹದೇಶ್ವರ ಸಮಿತಿ ವತಿಯಿಂದ ಶ್ರೀ ಭಗವತಿ ದೇವಾಲಯದಲ್ಲಿ ವಾರ್ಷಿಕ ಹಬ್ಬ ತಾ. ೨೬ ರಿಂದ ನಡೆಯಲಿದೆ.
ತಾ. ೨೬ ರಂದು ಸಂಜೆ ೬.೩೦ ಗಂಟೆಗೆ ಮಹದೇಶ್ವರ ದೇವಸ್ಥಾನದಲ್ಲಿ ಅಂದಿಬೊಳಕ್, ತಾ. ೨೭ ರಂದು ಪಟ್ಟಣಿ, ಬೆಳಿಗ್ಗೆ ೬.೩೦ಕ್ಕೆ ಭಗವತಿ ದೇವಸ್ಥಾನದಲ್ಲಿ ಗಣಪತಿ ಹೋಮ, ೭.೩೦ಕ್ಕೆ ತಕ್ಕರ ಮನೆಯಿಂದ ಭಂಡಾರ ತರುವುದು. ೮ ಗಂಟೆಗೆ ಶ್ರಿ ಭಗವತಿ ದೇವಸ್ಥಾನದಲ್ಲಿ ದೇವರು ಹೊರಗೆ ಬರುವುದು, ೯ಕ್ಕೆ ಶ್ರೀ ಮಹದೇಶ್ವರ ಸನ್ನಿಧಿಯಲ್ಲಿ ಬೇಡು ಹಬ್ಬ ಆಚರಣೆ, ಸಂಜೆ ೪ ಗಂಟೆಗೆ ಭಗವತಿ ದೇವಸ್ಥಾನದಲ್ಲಿ ದೇವರು ಹೊರಗೆ ಬರುವುದು,
ತಾ. ೨೮ ರಂದು ಅಪರಾಹ್ನ ೩ ಗಂಟೆಯಿAದ ಶ್ರೀ ಭಗವತಿ ದೇವಿಯ ಉತ್ಸವ, ದೇವರ ಆವಭೃತ ಸ್ನಾನ, ನೃತ್ಯಬಲಿ, ಮಹಾ ಪೂಜೆ, ರಾತ್ರಿ ೯ ಗಂಟೆಗೆ ಅನ್ನದಾನ ನಡೆಯಲಿದೆ. ತಾ. ೨೯ ರಂದು ಭಗವತಿ ದೇವಸ್ಥಾನದಲ್ಲಿ ಶುದ್ಧ ಕಲಶ, ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ತಾ. ೩೦ ರಂದು ಭದ್ರಕಾಳಿ ದೇವಿಯ ಕೋಲ, ಪಟ್ಟಣಿ, ತಾ. ೩೧ ರಂದು ರಾತ್ರಿ ೭ ಗಂಟೆಗೆ ತೋಯತ ತೆರೆ ನಡೆಯುತ್ತದೆ. ಏಪ್ರಿಲ್ ೧ ರಂದು ರಾತ್ರಿ ೭ಗಂಟೆಗೆ ಅಂದಿ ತ್ವಾತ ತೆರೆ, ೮ ಗಂಟೆಗೆ ಮೇಲೆರಿಗೆ ಅಗ್ನಿ ಸ್ಪರ್ಶ, ನಂತರ ಉಚ್ಚ ತೋಯತ ತೆರೆ ಮತ್ತು ಮಂದಣ್ಣ ಮೂರ್ತಿ ಕೋಲ ನಡೆಯಲಿದೆ. ಏ. ೨ ರ ಬೆಳಿಗ್ಗೆ ೮ ಗಂಟೆಗೆ ಶ್ರಿ ಕಲಿಯಾಟಜ್ಜಪ್ಪ ಕೋಲ ಮತ್ತು ೧೧ ಗಂಟೆಗೆ ಶ್ರಿ ಚಾಮುಂಡಿ ಕೋಲ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷರು, ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.