ಮಡಿಕೇರಿ: ಇಲ್ಲಿನ ಸುದರ್ಶನ ಅತಿಥಿ ಗೃಹದ ಬಳಿ ಇರುವ ಶ್ರೀ ಮುನೇಶ್ವರ ಹಾಗೂ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ನಿನ್ನೆ ಬೆಳಿಗ್ಗೆಯಿಂದಲೇ ವಿವಿಧ ಪೂಜಾದಿ ಕಾರ್ಯಗಳೊಂದಿಗೆ ಮಧ್ಯಾಹ್ನ ಮಹಾಪೂಜೆಯ ಬಳಿಕ ತೀರ್ಥ ಪ್ರಸಾದ ವಿತರಣೆ ನೆರವೇರಿತು. ನೆರೆದಿದ್ದ ಸಹಸ್ರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯ ಸಮಿತಿ ಪದಾಧಿಕಾರಿಗಳು ವಾಹನ ಹಾಗೂ ಜನದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಿದರು.

ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದ ವ್ಯಾಪ್ತಿಯ ನಲ್ವತ್ತೇಕರೆಯಲ್ಲಿ ಇತಿಹಾಸ ಪ್ರಸಿದ್ಧ ಬೀರಾನ ಕ್ಷೇತ್ರದಲ್ಲಿ ಬೀರಾನ ಹಾಗೂ ಚಾಮುಂಡಿಯ ತೆರೆ ಮಹೋತ್ಸವ ಸಂಭ್ರಮದಿAದ ನಡೆಯಿತು.

ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದು ಬಳಿಕ ತೆರೆ ಮಹೋತ್ಸವ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಮಡಿಕೇರಿ: ಇಲ್ಲಿನ ಹಳೆ ತಾಲೂಕು ಕಚೇರಿ ಬಳಿ ಇರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆಯಿಂದ ವಿವಿಧ ಪೂಜಾ ವಿಧಿವಿಧಾನದೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ಪ್ರಸಾದ ವಿನಿಯೋಗದೊಂದಿಗೆ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.ವೀರಾಜಪೇಟೆ: ವೀರಾಜಪೇಟೆಯಲ್ಲಿ ಮುತ್ತಪ್ಪ ತೆರೆ ಜಾತ್ರೆ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ವೀರಾಜಪೇಟೆಯ ಮೀನುಪೇಟೆಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ ೮೨ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವವನ್ನು ೩ ದಿನಗಳ ಕಾಲ ಸಕಲ ಪೂಜಾ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿAದ ಆಚರಿಸಲಾಯಿತು. ಸಾವಿರಾರು ಭಕ್ತಾದಿಗಳು ಜಾಗರಣೆಯಿದ್ದು, ದೇವರ ದರ್ಶನ ಪಡೆದರು.

ಮುತ್ತಪ್ಪ, ವಸೂರಿಮಾಲಾ, ತಿರುವಪ್ಪನ್, ಗುಳಿಗ, ವಿಷ್ಣುಮೂರ್ತಿ, ಪೌವ್ವದಿ ದೇವತೆಗಳು ಭಕ್ತಾದಿಗಳಿಗೆ ದರ್ಶನ ನೀಡಿದವು. ಪಯಂಗುತ್ತಿ ಹಾಗೂ ತುಲಾಭಾರ, ಇನ್ನಿತರ ಹರಕೆ ಕಾರ್ಯಗಳನ್ನು ಭಕ್ತಾದಿಗಳು ನೆರವೇರಿಸಿ ತಮ್ಮ ಜೀವನದ ಜಂಜಾಟ ಹಾಗೂ ಕಷ್ಟ ಕಾರ್ಪಣ್ಯಗಳನ್ನು ದೇವರ ಮುಂದಿಟ್ಟು ಪರಿಹಾರಕ್ಕೆ ಮೊರೆಯಿಟ್ಟರು. ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ಹಾಗೂ ತಾಲಪ್ಪೋಲಿ ಮೆರವಣಿಗೆ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯದ ಬಳಿಯಿಂದ ಹೊರಟಿತು. ನಗರದ ಮುಖ್ಯ ರಸ್ತೆಗಳಲ್ಲಿ ಪ್ರಸಿದ್ಧ ಕಲಾ ತಂಡದವರಿAದ ವಿವಿಧ ಕಲಾ ರೂಪಗಳೊಂದಿಗೆ ನಡೆಯಿತು.

ಗಣಪತಿ ಹೋಮ, ಬಳಿಕ ಧ್ವಜಾರೋಹಣ ಮಾಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಶ್ರೀ ಮುತ್ತಪ್ಪ ವೆಳ್ಳಾಟಂ ನಡೆಯಿತು. ದೇವರ ಮಲೆ ಇಳಿಸುವುದು, ಶ್ರೀ ಮುತ್ತಪ್ಪ ವೆಳ್ಳಾಟಂ, ಬಳಿಕ ತೆಲುಗರ ಬೀದಿಯಿಂದ ಮೊದ ಕಲಶದೊಂದಿಗೆ ತಾಲಪ್ಪೊಲಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ವಿವಿಧ ಚಂಡೆ ಮೇಳ, ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಲಾಯಿತು. ಪಂಜರಪೇಟೆ ಮುತ್ತಪ್ಪ ಸೇವಾ ಸಮಿತಿ, ಹಾಗೂ ಕಲ್ಲುಬಾಣೆಯ ಮುತ್ತಪ್ಪ ಸೇವಾ ಸಮಿತಿ ವತಿಯಿಂದ ಕಲಶ ಮೆರವಣಿಗೆ ನಡೆಯಿತು.

ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, ತಿರುವಪ್ಪನ ತೆರೆ, ಭಗವತಿ ತೆರೆ, ವಸೂರಿಮಾಲ, ವಿಷ್ಣುಮೂರ್ತಿ ತೆರೆ ನಡೆಯಿತು. ಅನ್ನಸಂತರ್ಪಣೆ ಬಳಿಕ ವಿಷ್ಣು ಮೂರ್ತಿ ವಾರಣದೊಂದಿಗೆ ೨೦೨೬ ಸಾಲಿನ ಶ್ರೀ ಮುತ್ತಪ್ಪ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ಜಾತ್ರೆಯ ಅಂಗವಾಗಿ ಮೀನುಪೇಟೆ ಮುಖ್ಯರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮೂರು ದಿನಗಳ ಕಾಲ ಅನ್ನಸಂತರ್ಪಣೆ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು ಕಂಡುಬAತು.

ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವರ ಪೇಟೆ ಮೆರವಣಿಗೆ ಹಾಗೂ ಶ್ರೀ ಮುತ್ತಪ್ಪ ದೇವರ ಮೊದಕಳಶ ಹಾಗೂ ತಾಲಪ್ಪೋಲಿ ಮೆರವಣಿಗೆ ಏಕಕಾಲದಲ್ಲಿ ನಡೆದು ವೀರಾಜಪೇಟೆ ಪಟ್ಟಣಕ್ಕೆ ಶೋಭೆ ತಂದು ಭಕ್ತಾದಿಗಳ ಮನತಣಿಸಿತು.

ಈ ಸಂದರ್ಭದಲ್ಲಿ ಮುತ್ತಪ್ಪ ದೇವಾಲಯ ಸಮಿತಿಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ. ರಾಜನ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುತ್ತಪ್ಪ ಮಲಯಾಳಿ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಸುಮೇಶ್ ಪಿ.ಜಿ. ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಸಮುದಾಯ ಭಾಂದವರು, ವೀರಾಜಪೇಟೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಭಕ್ತಾದಿಗಳು ತೆರೆ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ನಾಪೋಕ್ಲು: ಇಲ್ಲಿಯ ನಾಡು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ವಿಜೃಂಭಣೆಯಿAದ ಜರುಗಿತು. ವಿವಿಧ ಆರಾಧನಾ ಕಾರ್ಯಕ್ರಮಗಳೊಂದಿಗೆ ನಡೆದುಕೊಂಡು ಬಂದ ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಸಾಂಪ್ರದಾಯಕವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.

ತಕ್ಕರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ, ದೇವರ ಊರ ಪ್ರದಕ್ಷಿಣೆ ನೆರವೇರಿತು. ಪಟ್ಟಣಿ ಹಬ್ಬದ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ದೇವರ ದರ್ಶನ ಅನಂತರ ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಜರುಗಿದ ಬಳಿಕ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೋಳಕಾಟ್, ದೇವರ ಪ್ರದರ್ಶನ ನೃತ್ಯ ಮಹೋತ್ಸವ ಸಾಂಗವಾಗಿ ನೆರವೇರಿತು. ಉತ್ಸವದ ಧಾರ್ಮಿಕ ಪೂಜಾ ವಿಧಿವಿಧಾನವನ್ನು ತಂತ್ರಿ ಶ್ರೀಹರಿ ಕೆದಿಲಾಯ, ದೇವಾಲಯದ ಮುಖ್ಯ ಅರ್ಚಕ ಹರೀಶ್ ಕೇಕುಣ್ಣಾಯ ಹಾಗೂ ದೇವರ ನೃತ್ಯ ಮಹೋತ್ಸವವನ್ನು ಜಯಚಂದ್ರ ನೆರವೇರಿಸಿಕೊಟ್ಟರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೇಟಿರ ಶಂಕರಿ, ಕಾರ್ಯದರ್ಶಿ ಕಂಗಾAಡ ಜಾಲಿ ಪೂವಪ್ಪ, ಆಡಳಿತ ಮಂಡಳಿ ನಿರ್ದೇಶಕರು, ತಕ್ಕಮುಖ್ಯಸ್ಥರಾದ ಕೆಲೇಟಿರ, ತಿರೋಡಿರ, ಕುಲ್ಲೇಟಿರ, ನಾಟೋಳಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಮುಂದಾಳತ್ವದಲ್ಲಿ ವಾರ್ಷಿಕ ಉತ್ಸವ ಜರುಗಿತು. ಈ ಸಂದರ್ಭ ಊರು, ಪರ ಊರಿನ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆ, ಕಾಣಿಕೆ ಸೇವೆಯನ್ನು ನೆರವೇರಿಸಿಕೊಂಡರು. ಪವಿತ್ರ ಕಾವೇರಿ ನದಿಯಲ್ಲಿ ಭಗವತಿ ದೇವರ ಅವಭೃತ ಸ್ನಾನ ಮತ್ತು ನಗರದಲ್ಲಿ ಚಂಡೆ ಮೇಳಗಳೊಂದಿಗೆ ಮೆರವಣಿಗೆ ನಡೆಯಿತು. ನಂತರ ದೇವಾಲಯಕ್ಕೆ ಹಿಂತಿರುಗಿ ನೃತ್ಯೋತ್ಸವ, ನರಿಪೂದ, ನುಚ್ಚುಟೆ, ಅಂಜಿ ಕೂಟ್ ಮೂರ್ತಿ, ಕಲಿಯಾಟ ಅಜ್ಜಪ್ಪ ಮತ್ತು ವಿಷ್ಣುಮೂರ್ತಿ ದೇವರ ಕೋಲ ಸೇರಿದಂತೆ ವಿವಿಧ ಭೂತಾರಾಧನೆ ನಡೆದು ಅನ್ನದಾನದೊಂದಿಗೆ ಹಬ್ಬವು ಸಂಪನ್ನಗೊAಡಿತು.ಶ್ರೀರಾಮನಿಗೆ ಹಳದಿ ವಸ್ತçದ ಅಲಂಕಾರ

ಶನಿವಾರಸAತೆ: ಪಟ್ಟಣದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಮುಖ್ಯ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ನವಮಿ ಆಚರಣೆಗಾಗಿ ೮ ದಿನಗಳ ರಾಮೋತ್ಸವ ಪ್ರಯುಕ್ತ ಬೆಳಿಗ್ಗೆ ೮.೩೦ ರಿಂದ ೧೦.೩೦ ರವರೆಗೆ ಹಾಗೂ ಸಂಜೆ ೬.೩೦ ರಿಂದ ರಾತ್ರಿ ೮.೩೦ ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಯುಗಾದಿ ಹಬ್ಬದಂದು ಚಾಲನೆ ನೀಡಲಾಯಿತು. ಗುರುವಾರ ಪ್ರಥಮ ದಿನ ಶ್ರೀಸೀತಾ, ಲಕ್ಷö್ಮಣ, ಆಂಜನೇಯ ಸಹಿತ ಶ್ರೀರಾಮ ದೇವರ ಉತ್ಸವ ಮೂರ್ತಿಗಳಿಗೆ ಹಳದಿ ವಸ್ತçದ ಅಲಂಕಾರ ಮಾಡಿ ಪೂಜಿಸಲಾಯಿತು. ರಾತ್ರಿ ನೂತನ ಪರಾಭವ ಸಂವತ್ಸರ ಪ್ರಯುಕ್ತ ಪಂಚಾAಗ ಶ್ರವಣ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗವಾಯಿತು. ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅರ್ಚಕ ಸುಹಾಸ್ ಭಟ್ ಪೂಜಾ ವಿಧಿ ನೆರವೇರಿಸಿದರು. ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.ಶ್ರೀ ಕುರಂಬ ದೇವಾಲಯ ವಾರ್ಷಿಕೋತ್ಸವ

ಸುಂಟಿಕೊಪ್ಪ: ಕೊಡಂಗಲ್ಲೂರ್ ಶ್ರೀ ಕುರಂಬ (ಭಗವತಿ) ದೇವಸ್ಥಾನದಲ್ಲಿ ವಿಶೇಷ ವಾರ್ಷಿಕ ಮಹಾಪೂಜೆಯೊಂದಿಗೆ ಆರಂಭಗೊAಡು ವೆಳ್ಳಾಟಂ, ಹರಕೆ ಅರ್ಪಣೆಗಳನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಸಮರ್ಪಿಸುವುದರೊಂದಿಗೆ ದೇವಾಲಯದ ವಾರ್ಷಿಕೋತ್ಸವ ಸಂಪನ್ನಗೊAಡಿತು.

೬೦ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಕೆಸರಿ ಬಂಟಿAಗ್ಸ್, ಬಣ್ಣಬಣ್ಣದ ಹೂ, ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿತ್ತು. ಗಣಪತಿ ಹೋಮ, ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವರ ಪೂಜೆ, ಮುತ್ತಪ್ಪ ದೇವರ ವೆಳ್ಳಾಟ ಮತ್ತು ಪೈಂಗುತ್ತಿ, ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ಗುಳಿಗನ ಪೂಜೆ, ಶ್ರೀ ಭದ್ರಕಾಳಿ ದೇವಿಗೆ ಆರ್ಚನೆ, ನೈವೇದ್ಯ ಪೂಜೆ, ಶ್ರೀ ದೇವಿ ದರ್ಶನ, ತಲಪುರಿ ಮೆರವಣಿಗೆ, ವಸೂರಿ ಮಾಲೆ ದೇವರ ವೆಳ್ಳಾಟಂ, ದೇವಿ ದರ್ಶನ ನಂತರ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆದು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ೨ ದಿನಗಳ ಕಾಲ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು. ಸುಂಟಿಕೊಪ್ಪ, ಶ್ರೀದೇವಿ, ಹರದೂರು, ನಾಕೂರು, ಕಂಬಿಬಾಣೆ, ಮತ್ತಿಕಾಡು, ಕೇರಳ ರಾಜ್ಯದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ದೇವಾಲಯದ ಮುಖ್ಯಸ್ಥರಾದ ಪಿ.ಆರ್. ಶಾಂತ ರಾಮಕೃಷ್ಣ, ಪಿ.ಆರ್. ಸುಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.ವೀರಾಜಪೇಟೆ: ನಗರಕ್ಕೆ ಕಳಶ ಪ್ರಾಯದಂತಿರುವ ಮಲೆಯಲ್ಲಿ ಸ್ಥಿತಗೊಂಡ ಶ್ರೀಮಲೆ ಮಹದೇಶ್ವರ ದೇವರ ವಾರ್ಷಿಕ ಉತ್ಸವ ಅಂಗವಾಗಿ ಪೇಟೆ ಮೆರವಣಿಗೆ ನಡೆಯಿತು.

ವೀರಾಜಪೇಟೆ ನಗರಕ್ಕೆ ಮುಕುಟದಂತಿರುವ ಮಲೆತಿರಿಕೆ ಬೆಟ್ಟ ಎಂದು ಪ್ರಖ್ಯಾತಿ ಪಡೆದಿರುವ ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು, ಕುಕ್ಲೂರು ಭಾಗಗಳಿಗೆ ಸೇರಿದ ಶ್ರೀ ಮಲೆ ಮಹದೇಶ್ವರ ದೇವರ ವಾರ್ಷಿಕ ಉತ್ಸವಕ್ಕೆ ಕುಂದಿರ ಮನೆಯಿಂದ ಭಂಡಾರ ಬಂದು ದೇಗುಲದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಚಾಲನೆ ದೊರೆಯಿತು.

ನಾಗದೇವರ ವಿಶೇಷ ಪೂಜೆ, ಶ್ರೀ ಅಯ್ಯಪ್ಪ ದೇವರ ವಿಶೇಷ ಪೂಜೆ, ಇರ್‌ಬೊಳಕ್ ಮಹಾಪೂಜೆ ನಡೆಯಿತು. ನೆರಪು, ಎತ್ತ್ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು ನಂತರದಲ್ಲಿ ಶ್ರೀ ದೇವರಿಗೆ ಮಹಾ ಪೂಜೆ ಸಲ್ಲಿಕೆಯಾಯಿತು. ಶ್ರೀ ಮಲೆ ಮಹದೇಶ್ವರ ದೇವರ ಉತ್ಸವ ಮೂರ್ತಿ (ತಡಂಬು) ನಗರ ಪ್ರದಕ್ಷಿಣೆ ಮಾಡಿತು. ನಗರದ ತೆಲುಗರ ಬೀದಿ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ(ಗೌರಿ ದೇವಸ್ಥಾನ)ದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಸವೇಶ್ವರ ದೇಗುಲದ ಆಡಳಿತ ಮಂಡಳಿಯ ವತಿಯಿಂದ ಲಘು ಉಪಹಾರ ಕಾರ್ಯಕ್ರಮ ನಡೆಯಿತು. ದೇವರ ಉತ್ಸವಮೂರ್ತಿಯ ಮೆರವಣಿಗೆ ಮುಖ್ಯ ಬೀದಿಗಾಗಿ ಸಂಚರಿಸಿ ಬಳಿಕ ರಾಂಲಾಲ್ (ಸತ್ಯ ನಾರಾಯಣ ಕಾಂಪ್ಲೆಕ್ಸ್) ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಂಗ ಬೀದಿಯ (ವರ್ಷದಲ್ಲಿ ಒಂದು ದಿನ ಮಾತ್ರ ದರ್ಶನ ಭಾಗ್ಯ ಕರುಣಿಸುವ) ಶ್ರೀ ಮಹಾಲಕ್ಷಿ÷್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಖ್ಯ ಬೀದಿಗಾಗಿ ಮಲೆ ಮಹದೇಶ್ವರ ದೇಗುಲಕ್ಕೆ ಹಿಂದಿರುಗಿತು.

ಶ್ರೀ ದೇವರಪೇಟೆ ಆಗಮನ ಅಂಗವಾಗಿ ಮುಖ್ಯ ಬೀದಿಗಳು ಸೇರಿದಂತೆ ಬಸವೇಶ್ವರ ದೇಗುಲ, ಮಹಾಲಕ್ಷಿö್ಮ ದೇಗುಲ, ಪಟ್ಟಣದ ಎಲ್ಲಾ ದೇಗುಲಗಳು ವಿದ್ಯುತ್ ಅಲಂಕೃತವಾಗಿ ಕಂಗೊಳಿಸಿತು. ಕೇರಳ ಚಂಡೆವಾದ್ಯ ಮತ್ತು ಕೊಡಗಿನ ಸಾಂಪ್ರದಾಯಿಕ ಓಲಗ ದೇವರ ಮೆರವಣಿಗೆಗೆ ಮೆರುಗು ನೀಡಿದವು.

ಶ್ರೀ ದೇವರ ಪೇಟೆ ಮೆರವಣಿಗೆ ತೆಲುಗರ ಬೀದಿ, ಜೈನರ ಬೀದಿ, ಎಫ್.ಎಂ.ಸಿ. ರಸ್ತೆ, ಮುಖ್ಯ ಬೀದಿ, ದೇವಾಂಗ ಬೀದಿ, ಶ್ರೀ ಮಹಾಗಣಪತಿ ದೇಗುಲದ ಸನೀಹದ ರಾಂ ಲಾಲ್ ಅವರ ಸ್ಥಳದಲ್ಲಿ ಭಕ್ತರಿಂದ ಶ್ರೀ ದೇವರಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸಿ ಶ್ರೀ ದೇವರ ಅನುಗ್ರಹ ಪಡೆದರು.

ಈ ಸಂದರ್ಭ ದೇಗುಲದ ತಕ್ಕ ಮುಖ್ಯಸ್ಥರಾದ ಕೊಳುವಂಡ ರಾಜರಾಮ್, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವಾಟೇರಿರ ಶಂಕರಿ ಪೊನ್ನಪ್ಪ, ದೇವಾಲಯ ಸಮಿತಿ ಕಾನೂನು ಸಲಹೆಗಾರರಾದ ಬೊಳ್ಳಚಂಡ ಸೋಮಣ್ಣ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಶ್ರೀ ಬಸವೇಶ್ವರ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರನಾಥ್ ಕಾಮತ್, ಪದಾಧಿಕಾರಿಗಳಾದ ಪುಷ್ಪರಾಜ್, ಪ್ರಸಾದ್, ಸಂಪತ್, ಟಿ.ಪಿ. ಕೃಷ್ಣ, ಲೋಕನಾಥ್, ನರೇಂದ್ರ ಕಾಮತ್, ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು ಗ್ರಾಮಗಳ ಗ್ರಾಮಸ್ಥರು, ಪ್ರಮುಖರು, ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ಉತ್ಸವದಲ್ಲಿ ಭಾಗಿಗಳಾದರು.ವೀರಾಜಪೇಟೆ: ನಗರ ಸೇರಿದಂತೆ ಐಮಂಗಲ, ಮಗ್ಗುಲ, ಕುಕ್ಲೂರು, ಚೆಂಬೆಬೆಳ್ಳೂರು ಗ್ರಾಮಗಳ ಆದಿ ದೇವನಾದ ಶ್ರೀ ಮಲೆಮಹದೇಶ್ವರ ಬೆಟ್ಟದ ತಪ್ಪಲ್ಲಿನಲ್ಲಿದ್ದ ಬಸವನ ಕಟ್ಟೆ ಪುನರ್ ನಿರ್ಮಾಣಗೊಂಡು ಪ್ರತಿಷ್ಠಾಪನೆಗೊಂಡಿತು.

ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಲೆ ಮಹಾದೇಶ್ವರ ಬೆಟ್ಟದಲ್ಲಿರುವ ಈಶ್ವರ ದೇವನಿಗೆ ಅಭಿಮುಖವಾಗಿ ತಪ್ಪಲಿನಲ್ಲಿ (ಮಗ್ಗುಲ, ಸುಂಕದಕಟ್ಟೆ) ಇಂದಿನ ವೀರಾಜಪೇಟೆ - ಸಿದ್ದಾಪುರ ರಸ್ತೆಯ ಬದಿಯಲ್ಲಿರುವ ಬಸವನ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ವರ್ಷದಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆಯುವ ಶ್ರೀ ಮಲೆ ಮಹದೇಶ್ವರ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಇಲ್ಲಿ ನೆಲೆಸಿರುವ ಬಸವನಿಗೆ ವಿಶೇಷ ಪೂಜೆಗಳು ಸಲ್ಲುತ್ತವೆ.

ಬಸವನಕಟ್ಟೆ ಶಿಥಿಲಗೊಂಡಿರುವುದರಿAದ ಮತ್ತು ರಸ್ತೆ ಅಗಲೀಕರಣದ ವೇಳೆ ಬಸವನಿಗೆ ಹಾನಿಯಾಗುವ ಹಿನ್ನೆಲೆ ಶ್ರೀ ಮಲೆ ಮಹದೇಶ್ವರ ದೇಗುಲದ ಆಡಳಿತ ಮಂಡಳಿಯು ಸ್ಥಳಾಂತರ ಮಾಡಲು ತೀರ್ಮಾನ ಮಾಡಿತ್ತು. ಕುಕ್ಲೂರು ಮಾಳೇಟಿರ ಕುಟುಂಬಸ್ಥರು ಬಸವನ ಕಟ್ಟೆಯ ಆರಾಧಕರಾಗಿದ್ದು, ದೇಗುಲ ಸಮಿತಿ ಮನವಿಯ ಮೇರೆಗೆ ಕುಟುಂಬಸ್ಥರು ಸ್ಪಂದಿಸಿ ನೂತನ ಬಸವನ ಕಟ್ಟೆ ಮರು ಸ್ಥಾಪನೆಗೆ ಮುಂದಾದರು. ಬಸವನ ಕಟ್ಟೆ ಪುನರ್ ನಿರ್ಮಾಣಗೊಂಡು ಬಸವನ ಕಟ್ಟೆಯಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ತಂತ್ರಿಗಳಾದ ಹರೀಶ್ ಪಂಡರೀಶ ಅವರ ನೇತೃತ್ವದಲ್ಲಿ ಇತರ ಪುರೋಹಿತ ವರ್ಗಗಳ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾನೆಗೊಂಡಿತು. ಪೂಜಾ ಕಾರ್ಯಕ್ರಮದಲ್ಲಿ ಮಾಳೇಟಿರ ಕುಟುಂಬದ ಅಧ್ಯಕ್ಷ ಅಭಿನ್ ಕುಶಾಲಪ್ಪ, ಕಾರ್ಯದರ್ಶಿ ಪ್ರಥ್ವಿ ಪೊನ್ನಪ್ಪ, ಹಿರಿಯರಾದ ವಿದುರ ತಿಮ್ಮಯ್ಯ, ಸರಸ್ವತಿ ತಿಮ್ಮಯ್ಯ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಶ್ರೀ ಮಲೆ ಮಹಾದೇಶ್ವರ ದೇಗುಲದ ನಾಡಿನ ತಕ್ಕರಾದ ಕೊಳುವಂಡ ರಾಜರಾಮ್, ಟ್ರಸ್ಟ್ ಅಧ್ಯಕ್ಷ ವಾಟೇರಿರ ಶಂಕರ್ ಪೂವಯ್ಯ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಟ್ರಸ್ಟ್ ಕಾರ್ಯದರ್ಶಿ ಚೋಕಂಡ ರಮೇಶ್, ಭಂಡಾರ ತಕ್ಕರಾದ ಕುಪ್ಪಚ್ಚೀರ ಐಯ್ಯಪ್ಪ, ಚಾರಿಮಂಡ ಗಪ್ಪಣ್ಣ, ಬೊಳ್ಳಚಂಡ ಸೋಮಣ್ಣ, ಗ್ರಾಮಸ್ಥರು, ದೇಗುಲ ಸಮಿತಿಯ ಸದಸ್ಯರು ಬಸವನ ಕಟ್ಟೆ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಹಾಜರಿದ್ದರು.ಗುಡ್ಡೆಹೊಸೂರು: ಗುಡ್ಡೆಹೊಸೂರು ಗ್ರಾಮಕ್ಕೆ ಸೇರಿದ ಸುಣ್ಣದಕೆರೆಯ ಗ್ರಾಮ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪ್ರತಿವರ್ಷ ಯುಗಾದಿ ಮರುದಿನ ಇಲ್ಲಿ ಪೂಜಾ ಕಾರ್ಯ ನಡೆಸಲಾಗುತ್ತಿದೆ. ಈ ಪೂಜಾ ಕಾರ್ಯದಲ್ಲಿ ಗುಡ್ಡೆಹೊಸೂರು ಗ್ರಾಮಕ್ಕೆ ಸೇರಿದ ವಿವಿಧ ಭಾಗದಿಂದ ಸಾರ್ವಜನಿಕರು ಭಾಗವಹಿಸಿ ಪ್ರಸಾದ ಸ್ವೀಕರಿಸುತ್ತಾರೆ. ದೇವಸ್ಥಾನ ಸಮಿತಿಯ ಸದಸ್ಯರು ಇದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಭೈರವ ದೇವರ ೪ನೇ ವರ್ಷದ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಪೂಜಾ ಕೈಂಕರ್ಯವನ್ನು ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನವೀನ್ ಭಟ್ ತಂಡದವರು ನೆರವೇರಿಸಿದರು. ಉತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಅಭಿಷೇಕ, ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ, ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಿತು.

ಕೂಡಿಗೆ, ಮದಲಾಪುರ, ಹೆಗ್ಗಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಈ ಸಂದರ್ಭ ಭೈರವ ಯುವಕ ಸಂಘದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಚೇತನ್ ಸೇರಿದಂತೆ ಸಮಿತಿ ನಿರ್ದೇಶಕರು, ಸದಸ್ಯರು ಹಾಜರಿದ್ದರು.