ಗುಡ್ಡೆಹೊಸೂರು, ಮಾ. ೨೦: ಇಲ್ಲಿಗೆ ಸಮೀಪದ ಹೇರೂರು ಗ್ರಾಮದ ನಿವಾಸಿ ನಾಕೂರು ಶಿರಂಗಾಲ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿದ್ದ ಮಂದೊಡಿ ಜಗನ್ನಾಥ್ (ಶಶಿ) ಅವರನ್ನು ಹೇರೂರು ಗ್ರಾಮದ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಇದೇ ಸಂದಭÀð ಇವರ ಅವಧಿಯಲ್ಲಿ ಗ್ರಾಮದಲ್ಲಿ ನಿರ್ಮಿಸಿದ ಸಮುದಾಯ ಭವನವನ್ನು ಅವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ತೆಕ್ಕಡೆ ಸಿದ್ದಾರ್ಥ, ರವೀಂದ್ರ, ಮಂದೋಡಿ ಹೇಮಚಂದ್ರ, ಇಂದ್ರಕುಮಾರ್ ಮತ್ತು ಕಳೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದು ಪರಾಭವಗೊಂಡಿದ್ದ ಮೊಟ್ಟನ ಕರ್ಣ ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಕೋಡಿ ವಿನುತಾ ಮನು ನಡೆಸಿದರು.