ಕಣಿವೆ, ಮಾ. ೨೦: ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಲಭ್ಯತೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ.
ಯುಗಾದಿಯ ವರ್ಷ ದೊಡಕು ಆಚರಿಸಲು ಮನೆಗಳಲ್ಲಿ ಗ್ಯಾಸ್ ಇಲ್ಲದ ಕಾರಣ ಖಾಲಿ ಸಿಲಿಂಡರ್ಗಳೊAದಿಗೆ ಬೆಳ್ಳಂಬೆಳಗ್ಗೆಯೇ ಗ್ಯಾಸ್ ಸಿಲಿಂಡರ್ ಹೊತ್ತು ತರುವ ವಾಹನಕ್ಕಾಗಿ ರಸ್ತೆಯ ಬದಿಯಲ್ಲಿ ಗ್ರಾಹಕರು ಕಾದುನಿಂತರು. ಗ್ಯಾಸ್ ಬುಕ್ ಮಾಡಿ ೧೦ ದಿನಗಳು ಕಳೆದರೂ ಕೂಡ ಸಿಲಿಂಡರ್ ಪೂರೈಕೆ ಮಾಡುತ್ತಿಲ್ಲ ಎಂದು ಗ್ರಾಮದ ಸಂತೋಷ್, ಮಂಜುನಾಥ್, ಸೀನ, ಗೌರಮ್ಮ ಮೊದಲಾದವರು ಅಳಲು ತೋಡಿಕೊಂಡರು.